Connect with us

Cinema News

ಮೋಹನ್ ಜುನೇಜಾ, ದುಬೈ ರಫೀಕ್ ಅಭಿನಯದ ಕೊನೆಯ ಚಿತ್ರ ‘18 ಎಕರೆ ಸಿನಿಮಾ ಲಕ್ಕಪ್ಪ’

Published

on

‘ಗಾಯತ್ರಿ’ ಹಾಗೂ ‘ಪ್ರೀತಿಯ ಹುಚ್ಚ’ ಚಿತ್ರಗಳನ್ನು ನಿರ್ದೇಶಿಸಿರುವ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರರಂಗದ ತೆರೆಯ ಹಿಂದಿನ ಹಲವು ಘಟನೆಗಳು ಹಾಗೂ ಸಿನಿಮಾರಂಗಕ್ಕೆ ಕಾಲಿಡುವ ಹೊಸಬರ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಅವರು ನಿರ್ದೇಶಿಸಿರುವ ಚಿತ್ರದ ಹೆಸರು ‘18 ಎಕರೆ ಸಿನಿಮಾ ಲಕ್ಕಪ್ಪ’. ವಿಭಿನ್ನ ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಈ ಸಿನಿಮಾ ಗಾಂಧಿನಗರದ ಒಳಜಗತ್ತಿನ ಹಲವು ಸಂಗತಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ.

ಸಿನಿಮಾ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುವ ನಾಯಕ-ನಾಯಕಿಯರು ಎದುರಿಸುವ ಅನುಭವಗಳು, ಚಿತ್ರ ನಿರ್ಮಾಣದ ಬಗ್ಗೆ ಸಂಪೂರ್ಣ ಅರಿವಿಲ್ಲದೆ ಚಿತ್ರರಂಗಕ್ಕೆ ಬರುವ ನಿರ್ಮಾಪಕರನ್ನು ಕೆಲವರು ಹೇಗೆ ದಾರಿ ತಪ್ಪಿಸುತ್ತಾರೆ ಎಂಬಂತಹ ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಕಲಾವಿದರ ಬದುಕು ಹಾಗೂ ಅವರ ವೃತ್ತಿಜೀವನದಲ್ಲಿ ‘ಸಿನಿಮಾ’ ಹೇಗೆ ಒಂದು ಕನ್ನಡಿಯಂತೆ ಪ್ರತಿಬಿಂಬಿಸುತ್ತದೆ ಎಂಬುದನ್ನೂ ಕಥೆಯ ಮೂಲಕ ಕಟ್ಟಿಕೊಡಲಾಗಿದೆ. ಮಂಡ್ಯ, ಕೀಲಾರ, ಬೆಂಗಳೂರು, ಸಕಲೇಶಪುರ ಹಾಗೂ ಶ್ರವಣಬೆಳಗೊಳ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಪೂರ್ಣಗೊಳಿಸಲಾಗಿದೆ.

ಕುಮಾರ್ ಮೂವೀಸ್ ಬ್ಯಾನರ್‌ನಡಿ ದಯಾನಂದ್ ಕೆ., ಸುಬ್ರಮಣಿ ರಾಮಗೊಂಡನಹಳ್ಳಿ ಹಾಗೂ ಅವರ ಸ್ನೇಹಿತರು ಒಟ್ಟಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ವಿ.ಕುಮಾರ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜವಾಬ್ದಾರಿ ನಿರ್ವಹಿಸಿದ್ದಾರೆ. ತಸೀ ರಂಗರಾಜನ್ ಸಂಗೀತ ಸಂಯೋಜನೆ, ಅರುಣ್ ಛಾಯಾಗ್ರಹಣ ಹಾಗೂ ದುರ್ಗಾಪ್ರಸಾದ್ ಸಂಕಲನ ಚಿತ್ರಕ್ಕಿದೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಈಗಾಗಲೇ ಯು/ಎ ಪ್ರಮಾಣಪತ್ರ ದೊರೆತಿದ್ದು, ಬಿಡುಗಡೆಗೆ ಚಿತ್ರ ಸಿದ್ಧವಾಗಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ದೇಶಕ ವಿ.ಕುಮಾರ್ ತಿಳಿಸಿದ್ದಾರೆ.

ಚಿತ್ರದಲ್ಲಿ ಹರಿಚೇತು ಹಾಗೂ ಸಂಜನಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಸಂಗೀತ, ಸುಬ್ರಮಣಿ, ರಾಜಶೇಖರ, ದಯಾನಂದ, ಸತ್ಯಸಾಮ್ರಾಟ್, ಲಿಂಗೇಶ್, ನಯನಕೃಷ್ಣ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ವಿಶೇಷವೆಂದರೆ ಹಿರಿಯ ನಟ ಮೋಹನ್ ಜುನೇಜಾ ಹಾಗೂ ದುಬೈ ರಫೀಕ್ ಅವರ ಕೊನೆಯ ಚಿತ್ರವೂ ‘18 ಎಕರೆ ಸಿನಿಮಾ ಲಕ್ಕಪ್ಪ’ ಆಗಿದೆ. ವಿಭಿನ್ನ ಕಥಾವಸ್ತು ಮತ್ತು ಚಿತ್ರರಂಗದ ಒಳಗಿನ ಸಂಗತಿಗಳನ್ನು ತೆರೆಗೆ ತರುತ್ತಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಮೂಡಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Spread the love

Continue Reading