Connect with us

Cinema News

‘ಬ್ಯಾಂಗಲ್ ಬಂಗಾರಿ’ ಚಿತ್ರಕ್ಕೆ ಚಾಲನೆ: ಪ್ರೇಮದ ಜೊತೆ ಕ್ರೈಂ ಕಥೆ

Published

on

ಜನಪ್ರಿಯ ಗೀತೆಯ ಸಾಲೊಂದು ಇದೀಗ ಹೊಸ ಸಿನಿಮಾದ ಶೀರ್ಷಿಕೆಯಾಗಿ ರೂಪ ಪಡೆದಿದೆ. ಯುವ ರಾಜಕುಮಾರ್ ಅಭಿನಯದ ‘ಎಕ್ಕಾ’ ಚಿತ್ರದ ಜನಪ್ರಿಯ ‘ಬ್ಯಾಂಗಲ್ ಬಂಗಾರಿ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡಿರುವ ಹೊಸ ಸಿನಿಮಾ ಅದೇ ಹೆಸರಿನಲ್ಲಿ ಸೆಟ್ಟೇರಿದೆ. ಶಂಕರ್ ರಾಮ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮರಡಿಹಳ್ಳಿ ಚಂದ್ರ ನಾಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದ್ದು, ಶಾಸಕ ಗೋಪಾಲಯ್ಯ ಕ್ಯಾಮೆರಾ ಚಾಲನೆ ಮಾಡಿದರು.

‘ಬ್ಯಾಂಗಲ್ ಬಂಗಾರಿ’ ಪ್ರೇಮಕಥೆಯೊಂದಿಗೆ ಕ್ರೈಂ ಅಂಶವನ್ನೂ ಒಳಗೊಂಡಿರುವ ಚಿತ್ರವಾಗಿದೆ. ಸುನೀಲ್ ಶಶಿಧರ್ ಹಾಗೂ ಪ್ರಕೃತಿ ರಾಜೇಂದ್ರ ನಾಯಕ-ನಾಯಕಿಯಾಗಿ ನಟಿಸುತ್ತಿದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ ಹಾಗೂ ಸಂಪತ್ ಮೈತ್ರೇಯ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಬೆಂಗಳೂರಿನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ಬಳಿಕ ಸಕಲೇಶಪುರದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ‘ಫುಲ್ ಮೀಲ್ಸ್’ ಖ್ಯಾತಿಯ ಎನ್. ವಿನಾಯಕ ಸಂಭಾಷಣೆ ರಚಿಸಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತ ನಿರ್ದೇಶನ, ಸತೀಶ್ ಕೆ. ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೆ. ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ಹಾಡುಗಳನ್ನು ರಚಿಸಿದ್ದು, ವಿಜಯ್ ಪ್ರಕಾಶ್, ಕೈಲಾಶ್ ಖೇರ್, ಜಸ್ಕರಣ್ ಸಿಂಗ್ ಹಾಗೂ ಅನುರಾಧಾ ಭಟ್ ಧ್ವನಿ ನೀಡಲಿದ್ದಾರೆ.

ನಾಯಕ ಸುನೀಲ್ ಶಶಿಧರ್ ಅವರಿಗೆ ಇದು ನಾಯಕನಾಗಿ ಎರಡನೇ ಸಿನಿಮಾ. ಚಿತ್ರದಲ್ಲಿ ಅವರು AI ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಡಿಷನ್ ಮೂಲಕ ಆಯ್ಕೆಯಾಗಿದ್ದಾರೆ. ನಾಯಕಿ ಪ್ರಕೃತಿ ರಾಜೇಂದ್ರ ಅವರು ‘ಕಾವ್ಯ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ತಾವು ಮೂಲತಃ ನೃತ್ಯಗಾರ್ತಿಯಾಗಿರುವುದರಿಂದ ಚಿತ್ರದಲ್ಲಿ ನೃತ್ಯಕ್ಕೂ ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ ಎಂದಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದಾಗಿ ನಿರ್ಮಾಪಕ ಶಂಕರ್ ರಾಮ್ ರೆಡ್ಡಿ ತಿಳಿಸಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಟಾಪ್ ಸ್ಟಾರ್ ರೇಣು, ಛಾಯಾಗ್ರಾಹಕ ಸತೀಶ್, ನಟ ಸಂಪತ್ ಮೈತ್ರೇಯ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

Spread the love

Continue Reading