Connect with us

Cinema News

ನೈಜ ಪಾತ್ರಗಳ ಸ್ಫೂರ್ತಿಯಲ್ಲಿ ಮೂಡಿದ ‘ಬಾರ್ಡರ್ ಡೈರೀಸ್’ ಶೀಘ್ರದಲ್ಲೇ ತೆರೆಗೆ

Published

on

ವಿಭಿನ್ನ ಕಥಾಹಂದರ ಹಾಗೂ ನೈಜ ಬದುಕಿನ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಮೂಡಿಬರುತ್ತಿರುವ ಹೊಸಬರ ಪ್ರಯತ್ನ ‘ಬಾರ್ಡರ್ ಡೈರೀಸ್’ ಇದೀಗ ಗಮನ ಸೆಳೆಯುತ್ತಿದೆ. ಹೊಯ್ಸಳ ಫಿಲಂಸ್ ಬ್ಯಾನರ್‌ನಲ್ಲಿ ಹೊಯ್ಸಳ ಕೊಣನೂರು ನಿರ್ಮಿಸಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಎಎಸ್‌ಜಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ‘ಯಾರೋ ನೀನು ಯಾರೋ ನೀನು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಎಎಸ್‌ಜಿ ಸಾಹಿತ್ಯ ಬರೆದಿರುವ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿ ನೀಡಿದ್ದಾರೆ.

ಚಿತ್ರದ ಕಥೆಯ ಹಿನ್ನೆಲೆಯ ಕುರಿತು ನಿರ್ದೇಶಕ ಎಎಸ್‌ಜಿ ಮಾತನಾಡಿ, ತಮ್ಮ ಮೂಲ ಹೆಸರು ಶಶಿಕುಮಾರ್ ಎಂದೂ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿ ತಮ್ಮ ಊರು ಎಂದೂ ತಿಳಿಸಿದರು. ಸಿನಿಮಾ ಪಯಣಕ್ಕಾಗಿ ಎಎಸ್‌ಜಿ ಎಂಬ ಹೆಸರನ್ನು ಬಳಸುತ್ತಿರುವುದಾಗಿ ಹೇಳಿದರು. ಕರ್ನಾಟಕದ ಹುಡುಗ ಹಾಗೂ ತಮಿಳುನಾಡಿನ ಹುಡುಗಿಯ ಪ್ರೇಮಕಥೆ ಎಂಬ ಸರಳ ಚೌಕಟ್ಟಿಗಷ್ಟೇ ಸಿನಿಮಾ ಸೀಮಿತವಾಗಿಲ್ಲ. ಅತ್ತಿಬೆಲೆಯಾಚೆಗಿನ ಗಡಿ ಪ್ರದೇಶಗಳಲ್ಲಿ ತಾವು ಕಂಡ ವಿಶಿಷ್ಟ ಬದುಕು, ಅಲ್ಲಿನ ಜನರು ಹಾಗೂ ನೈಜ ಪಾತ್ರಗಳು ಕಥೆಗೆ ಪ್ರೇರಣೆಯಾಗಿವೆ. ಸುಮಾರು ಹತ್ತು ವರ್ಷಗಳ ಹಿಂದೆ ತಾವು ಓಡಾಡಿದ್ದ ಪ್ರದೇಶಗಳ ನೆನಪುಗಳು ಕಥೆ ರೂಪಿಸಲು ಕಾರಣವಾಗಿದ್ದು, ನಾಯಕಿ ಆ ಪ್ರದೇಶಕ್ಕೆ ಬಂದ ಬಳಿಕ ತೆರೆದುಕೊಳ್ಳುವ ಹೊಸ ಜಗತ್ತು ಚಿತ್ರದ ಪ್ರಮುಖ ಅಂಶವಾಗಿದೆ. ಪ್ರೇಮಕಥೆಯ ಸ್ಪರ್ಶದ ಜತೆಗೆ ಡ್ರಾಮಾ, ಕ್ರೈಮ್ ಹಾಗೂ ಸಾಮಾಜಿಕ ವಾಸ್ತವತೆಯ ಅಂಶಗಳೂ ಸಿನಿಮಾದಲ್ಲಿವೆ ಎಂದರು.

ಚಿತ್ರದ ಬಹುತೇಕ ಚಿತ್ರೀಕರಣ ಹೊಸೂರು ಹಾಗೂ ತಮಿಳುನಾಡಿನ ಗಡಿ ಭಾಗಗಳಲ್ಲಿ ನಡೆದಿದ್ದು, ಉಳಿದ ಭಾಗಗಳನ್ನು ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಹಾಗೂ ಸೆನ್ಸಾರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ನಿರ್ಮಾಪಕರಿಗೆ ಸಂಪೂರ್ಣ ಚಿತ್ರವನ್ನು ಪ್ರದರ್ಶಿಸಲಾಗಿದ್ದು, ಅವರು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಅಚ್ಯುತ್ ಬಿ.ಎಸ್. ಛಾಯಾಗ್ರಹಣ ಹಾಗೂ ಆಕಾಶ್ ಹಿರೇಮಠ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಗೀತರಚನೆಕಾರ ಕವಿರಾಜ್, ಚಿತ್ರತಂಡಕ್ಕೆ ಶುಭ ಹಾರೈಸಿದರು. ದೊಡ್ಡ ಬಜೆಟ್‌ನ ಕಮರ್ಷಿಯಲ್ ಸಿನಿಮಾಗಳ ಜತೆಗೆ ಹೊಸ ಪ್ರತಿಭೆಗಳು ಕಡಿಮೆ ಬಜೆಟ್‌ನಲ್ಲಿ ರೂಪಿಸುವ ಕಂಟೆಂಟ್ ಆಧಾರಿತ ಚಿತ್ರಗಳಿಗೂ ಪ್ರೇಕ್ಷಕರ ಬೆಂಬಲ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಚಿತ್ರದ ಪೋಸ್ಟರ್‌ನಲ್ಲೇ ಗಡಿ ಭಾಗದ ಸೂಕ್ಷ್ಮ ಕಥೆಯ ಸುಳಿವು ಸಿಗುತ್ತದೆ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು, ಕನ್ನಡ ಚಿತ್ರರಂಗದ ಬೆಳವಣಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಹೇಳಿದರು. ಹೊಯ್ಸಳ ಕೊಣನೂರು, ನಿರ್ದೇಶಕ ಎಎಸ್‌ಜಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.

Spread the love

Continue Reading