Cinema News
ದೇವಲೋಕ ಕೃಷ್ಣನಾದ ರಾಜ್ ಶೆಟ್ಟಿ

ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ದೊಡ್ಡ ಹೆಸರು ಮಾಡಿದ ನಟ ರಾಜ್ ಬಿ ಶೆಟ್ಟಿ ಈಗ ದೇವಲೋಕದಲ್ಲಿ ಕೃಷ್ಣನಾಗಿ ಅಪ್ಸರೆಯರ ಜತೆ ಡಾನ್ಸ್ ಮಾಡಿದ್ದಾರೆ.
ಹೌದು, ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ರಾಜ್ ಬಿ ಶೆಟ್ಟಿ, ಅಪ್ಸರೆಯರ ಜತೆ ನೃತ್ಯ ಮಾಡುತ್ತಿದ್ಧಾರೆ. ಈ ಅಪ್ಸರೆಯರು ಕಾರುಣ್ಯ ರಾಮ್ ಮತ್ತು ಶುಭಾ ಪೂಂಜಾ ಆಗಿದ್ದಾರೆ.
ಬೆಲ್ ಬಾಟಮ್ ಸಿನಿಮಾದಲ್ಲಿ ಸೆಗಣಿ ಪಿಂಟೋ ಪಾತ್ರದ ಮೂಲಕ ಫೇಮಸ್ ಆಗಿದ್ದ ಸುಜಯ್ ಶಾಸ್ತ್ರಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಅಯೋಗ್ಯ, ಚಮಕ್, ಬೀರಬಲ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಟಿ ಆರ್ ಚಂದ್ರಶೇಖರ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ನಿರ್ಮಾಪಕರಾಗಿದ್ದಾರೆ.
ಈಗ ಬಿಡುಗಡೆಯಾಗಿರುವ ಹಾಡು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದು, ರಾಜ್ ಬಿ ಶೆಟ್ಟಿ ಮತ್ತೊಮ್ಮೆ ನಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು.
