Connect with us

Cinema News

ಬಿಜಿಎಂ ಇಲ್ಲ, 12 ಕ್ಯಾಮೆರಾಗಳಲ್ಲಿ ಶೂಟಿಂಗ್; ದೀಕ್ಷಿತ್ ಶೆಟ್ಟಿಯ ‘ವಿಡಿಯೋ’ ವಿಭಿನ್ನ ಪ್ರಯೋಗ

Published

on

‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಇದೀಗ ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಧೀ ಸಿನಿಮಾಸ್’ ಎಂಬ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿರುವ ಅವರು, ಅದರ ಮೊದಲ ಚಿತ್ರವಾಗಿ ‘ವಿಡಿಯೋ’ ಎಂಬ ವಿಭಿನ್ನ ಹಾರರ್ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದಾರೆ. ‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಸೆಪ್ಟೆಂಬರ್ 11ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೈಲರ್ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಟೀಸರ್ ಹಾಗೂ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆದಿರುವ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭರತ್, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ, ಪ್ರಿಯಾ ಜೆ. ಆಚಾರ್ ಹಾಗೂ ನಲ್ಮೆ ನಚಿಯಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ವಿಡಿಯೋ’ ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ವಿಭಿನ್ನವಾಗಿದ್ದು, ಫೌಂಡ್ ಫೂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಸಿನಿಮಾದಲ್ಲಿ ಹಿನ್ನೆಲೆ ಸಂಗೀತವನ್ನು ಬಳಸದೇ, ಬರೋಬ್ಬರಿ 12 ಕ್ಯಾಮೆರಾಗಳ ನೆರವಿನಿಂದ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ಮಾಪಕ ದೀಕ್ಷಿತ್ ಶೆಟ್ಟಿ ತಿಳಿಸಿದ್ದಾರೆ. ಭರತ್ ಸಾಗರ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಚಿತ್ರತಂಡದೊಂದಿಗೆ ಕೈಜೋಡಿಸಿದ್ದಾರೆ. ತಾವು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಗಳಿಸಿದ ಹಣವನ್ನು ಕನ್ನಡ ಸಿನಿಮಾಗಳಲ್ಲೇ ಹೂಡಿಕೆ ಮಾಡುವುದಾಗಿ ದೀಕ್ಷಿತ್ ಹೇಳಿದ್ದಾರೆ. ಇತ್ತೀಚೆಗೆ ಎಎಂಬಿ ಸಿನಿಮಾಸ್‌ನಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಆಯೋಜಿಸಲಾಗಿದ್ದು, ಬುಕ್‌ಮೈಶೋನಲ್ಲಿ ಕೆಲವೇ ಗಂಟೆಗಳಲ್ಲಿ ಶೋಗಳು ಭರ್ತಿಯಾಗಿದ್ದವು. ಸಿನಿಮಾ ವೀಕ್ಷಿಸಿದವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರಿಗೆ ‘ವಿಡಿಯೋ’ ಮೂರನೇ ಸಿನಿಮಾ. ‘ಬ್ಲಿಂಕ್’ ಹಾಗೂ ‘ಜೆರಾಕ್ಸ್’ ಬಳಿಕ ಅವರು ಈ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಹಾರರ್ ಕಥೆಯನ್ನು ಸಾಧ್ಯವಾದಷ್ಟು ನೈಜವಾಗಿ ಪ್ರೇಕ್ಷಕರಿಗೆ ತಲುಪಿಸುವುದು ಹೇಗೆ ಎಂಬ ಆಲೋಚನೆಯಿಂದ ಫೌಂಡ್ ಫೂಟೇಜ್ ಪರಿಕಲ್ಪನೆ ಹುಟ್ಟಿಕೊಂಡಿತು ಎಂದು ಅವರು ಹೇಳಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೂಡ ಸಾಂಪ್ರದಾಯಿಕ ಶೈಲಿಗಿಂತ ಭಿನ್ನವಾಗಿದ್ದು, ಆರಂಭದಲ್ಲಿ ಸಿನಿಮಾಗೆ ‘ಬ್ಲಾಗ್’ ಎಂಬ ಹೆಸರಿಡಲಾಗಿತ್ತು. ಕಥೆಯಲ್ಲಿರುವ ಪ್ರಮುಖ ಪಾತ್ರಗಳೆಲ್ಲರೂ ಬ್ಲಾಗರ್‌ಗಳಾಗಿದ್ದು, ಅವರ ಬದುಕಿನ ಸುತ್ತ ಸಿನಿಮಾ ಸಾಗುತ್ತದೆ. ಆರಂಭದ ಸುಮಾರು 20 ನಿಮಿಷಗಳು ಪ್ರೇಕ್ಷಕರನ್ನು ನಗಿಸುವ ರೀತಿಯಲ್ಲಿದ್ದರೆ, ನಂತರ ಕಥೆ ನಿಧಾನವಾಗಿ ರೋಚಕ ತಿರುವು ಪಡೆದುಕೊಂಡು ಸೀಟ್ ಎಡ್ಜ್ ಥ್ರಿಲ್ ನೀಡಲಿದೆ ಎಂಬುದು ನಿರ್ದೇಶಕರ ಭರವಸೆ.

ನಾಯಕಿ ಪ್ರಿಯಾ ಜೆ. ಆಚಾರ್ ಅವರಿಗೆ ‘ವಿಡಿಯೋ’ ಎರಡನೇ ಸಿನಿಮಾವಾಗಿದ್ದು, ತಮ್ಮ ಪಾಲಿಗೆ ಇದು ವಿಶೇಷ ಅನುಭವ ಎಂದು ಹೇಳಿದ್ದಾರೆ. ನಿರ್ಮಾಪಕರು ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿರುವುದನ್ನು ಅವರು ಮೆಚ್ಚಿಕೊಂಡಿದ್ದಾರೆ. ವಿಭಿನ್ನ ಪ್ರಯತ್ನದ ಹಿಂದೆ ಸವಾಲು ಹಾಗೂ ರಿಸ್ಕ್ ಇರುವುದನ್ನು ಚಿತ್ರೀಕರಣದ ಸಂದರ್ಭದಲ್ಲೇ ಅರಿತುಕೊಂಡಿದ್ದಾಗಿ ತಿಳಿಸಿದರು. ಮತ್ತೊಬ್ಬ ನಟಿ ನಲ್ಮೆ ನಚಿಯಾರ್, ಕನಸನ್ನು ನಂಬಿ ಅದರ ಹಿಂದೆ ಸಾಗಲು ಧೈರ್ಯ ಬೇಕು, ಅದು ತಮ್ಮ ತಂಡದಲ್ಲಿದೆ ಎಂದು ಹೇಳಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಜೀವನ್ ಶಿವಕುಮಾರ್ ಕೂಡ ಸಿನಿಮಾದ ಕುರಿತು ಮಾತನಾಡಿದರು. ನಾಯಕ ಭರತ್ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ನೋವನ್ನು ನೆನೆದು ಭಾವುಕರಾದರು. ಪ್ರಸನ್ನಕುಮಾರ್ ಸಂಗೀತ ಹಾಗೂ ಅವಿನಾಶ್ ಶಾಸ್ತ್ರಿ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ವಿಭಿನ್ನ ಮೇಕಿಂಗ್‌ನಿಂದ ‘ವಿಡಿಯೋ’ ಸೆಪ್ಟೆಂಬರ್ 11ರಂದು ಪ್ರೇಕ್ಷಕರ ಮುಂದೆ ಬರಲಿದೆ.

Spread the love

Continue Reading