Connect with us

Cinema News

21 ದಿನಗಳ ಲಾಕ್‌ಡೌನ್‌ನಲ್ಲಿ ಅರಳುವ ಪ್ರೇಮಕಥೆ; ಹಿರಿತೆರೆಗೆ ಕಾಲಿಟ್ಟ ಹೊಸ ನಿರ್ದೇಶಕರ ಜೋಡಿ

Published

on

ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ದೇಶಾದ್ಯಂತ ಜಾರಿಯಾಗಿದ್ದ 21 ದಿನಗಳ ಲಾಕ್‌ಡೌನ್ ಜನಸಾಮಾನ್ಯರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿತ್ತು. ಆರ್ಥಿಕ ಸಂಕಷ್ಟ, ಉದ್ಯೋಗದ ಸಮಸ್ಯೆ, ಗೊಂದಲ ಹಾಗೂ ಮಾನಸಿಕ ಒತ್ತಡ ಸೇರಿದಂತೆ ಹಲವು ಸವಾಲುಗಳನ್ನು ಜನರು ಎದುರಿಸಿದ್ದರು. ಇದೇ ಕಠಿಣ ಕಾಲಘಟ್ಟದಲ್ಲಿ ಸಾಮಾನ್ಯ ಜನರು ಅನುಭವಿಸಿದ ಬದುಕಿನ ನೋವು-ನಲಿವು ಮತ್ತು ಮಾನವೀಯ ಸಂಬಂಧಗಳನ್ನು ಆಧಾರವಾಗಿಟ್ಟುಕೊಂಡು ‘ಲಾಕ್‌ಡೌನ್ 21 ಡೇಸ್’ ಸಿನಿಮಾ ಮೂಡಿಬರುತ್ತಿದೆ.

ಈ ಹಿಂದೆ ಹಲವು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ಮಧುಮೋಹನ್ ಮತ್ತು ಮಾಚಯ್ಯ ಜೋಡಿ, ಇದೀಗ ‘ಲಾಕ್‌ಡೌನ್ 21 ಡೇಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪ್ರವೇಶಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿತು. ‘ನಮ್ ಗಣಿ ಬಿಕಾಂ ಪಾಸ್’ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರು ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು. ಹೊಸ ಪ್ರತಿಭೆಗಳ ತಂಡ ಒಂದಾಗಿ ಕೈಜೋಡಿಸಿರುವ ಈ ಸಿನಿಮಾ ವಿಭಿನ್ನ ಪ್ರಯತ್ನವಾಗಿ ಮೂಡಿಬರುವ ನಿರೀಕ್ಷೆಯಿದೆ.

ಚಿತ್ರದಲ್ಲಿ ಅನಿಲ್ ಸಿ.ಕೆ., ಅರುಣ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು, ಅಕ್ಷಯ್, ಎಂ.ಕೆ. ಮಠ ಹಾಗೂ ಚಂದನ್ ಗೌಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದೇಶವೇ ಸ್ಥಬ್ಧವಾಗಿದ್ದ ಲಾಕ್‌ಡೌನ್‌ನ 21 ದಿನಗಳ ಅವಧಿಯಲ್ಲಿ ಅರಳುವ ಪ್ರೇಮಕಥೆಯ ಜೊತೆಗೆ ಮಾನವ ಸಂಬಂಧಗಳ ಮೌಲ್ಯ ಮತ್ತು ಗಟ್ಟಿತನವನ್ನು ಕಥೆಯಲ್ಲಿ ಪ್ರಮುಖವಾಗಿ ಕಟ್ಟಿಕೊಡಲಾಗುತ್ತಿದೆ. ಸಾಮಾಜಿಕ ವಾಸ್ತವಿಕತೆಯೊಂದಿಗೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿರಲಿವೆ.

‘ಅರುಣಾ ಯಾದವ್ ಫಿಲ್ಮ್ ಹೌಸ್’ ಬ್ಯಾನರ್ ಅಡಿಯಲ್ಲಿ ಮಹಿಳಾ ನಿರ್ಮಾಪಕಿ ಅರುಣಾ ಯಾದವ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಿರುಚಿತ್ರಗಳ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ತೋರಿಸಿರುವ ಮಧುಮೋಹನ್-ಮಾಚಯ್ಯ, ಇದೀಗ ಹಿರಿತೆರೆಯಲ್ಲಿ ದೊಡ್ಡ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ. ಸಮಾಜಕ್ಕೆ ಹತ್ತಿರವಾಗಿರುವ ಕಥೆಯನ್ನು ಉತ್ತಮ ಅಭಿರುಚಿಯೊಂದಿಗೆ ಪ್ರೇಕ್ಷಕರ ಮುಂದೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಸಾಮಾಜಿಕ ಕಾಳಜಿಯ ಜೊತೆಗೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಒಳಗೊಂಡಿರುವ ‘ಲಾಕ್‌ಡೌನ್ 21 ಡೇಸ್’ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ.

Spread the love

Continue Reading