Cinema News
‘ಗೀತಾ’ಳಿಗೆ ಧ್ವನಿ ನೀಡಿದ ಗೋಲ್ಡನ್ ಸ್ಟಾರ್ ಗಣಿ

ಗಣೇಶ್ ನಟಿಸಿರುವ ಗೀತಾ ಸಿನಿಮಾದ ಡಬ್ಬಿಂಗ್ ಕೆಲಸ ಮುಗಿದಿದೆ. ಈಗಾಗಲೇ ಸಿನಿಮಾದ ಸ್ಟಿಲ್‌ಗಳ ಮೂಲಕ ಡಿಫ್ರೆಂಟ್ ಚಿತ್ರ ಎಂದು ಹೆಸರು ಮಾಡಿರುವ ಗೀತಾದಲ್ಲಿ ಗಣೇಶ್‌ಗೆ ಮೂರು ಜನ ನಾಯಕಿಯರು.

ಸಂತೋಷ್ ಆನಂದ್‌ರಾಮ್ ಜತೆ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಯ್ಯದ್ ಸಲಾಂ, ಮತ್ತು ಶಿಲ್ಪಾ ಗಣೇಶ್ ಈ ಸಿನಿಮಾದ ನಿರ್ಮಾಪಕರು.
ಮಲೆಯಾಳಿ ಬೆಡಗಿ ಪಾರ್ವತಿ ಅರುಣ್ ಮತ್ತು ಪ್ರಯಾಗ ಮಾರ್ಟಿನ್ , ಶಾನ್ವಿ ಶ್ರೀವಾತ್ಸವ್ ಈ ಚಿತ್ರದ ನಾಯಕಿಯರು. ಉಳಿದಂತೆ ಸುಧಾ ರಾಣಿ , ದೇವರಾಜ್, ರಂಗಾಯಣ ರಘು, ಮತ್ತಿತರರು ಇದ್ದಾರೆ. ಕೋಲ್ಕತ್ತಾ, ಮೈಸೂರು, ಬೆಂಗಳೂರಿನಲ್ಲಿ ಚಿತ್ತೀಕರಣ ಮಾಡಲಾಗಿದೆ. ಸದ್ಯದಲ್ಲೆ ಚಿತ್ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ.

Continue Reading