Connect with us

Cinema News

‘ಬಾಯ್ಸ್ ನೆವರ್ ಕಾಂಪ್ರಮೈಸ್’ ಟೀಸರ್ ಬಿಡುಗಡೆ; ಹಾರರ್ ಕಾಮಿಡಿಗೆ ಚಾಲನೆ

Published

on

‘ಜಸ್ಟ್ ಮದ್ವೇಲಿ’ ಹಾಗೂ ‘ರಾಜಣ್ಣನ ಮಗ’ ಚಿತ್ರಗಳ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಹರೀಶ್ ಜಲಗೆರೆ ಅವರು ಇದೀಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ ‘ಬಾಯ್ಸ್ ನೆವರ್ ಕಾಂಪ್ರಮೈಸ್’. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಹಾಗೂ ‘ಬಾಯ್ಸ್ ಆಂಥೆಮ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಮಾರಿ ಗೋಲ್ಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಉಜ್ವಲ ನಾಗರಾಜ ಜಲಗೆರೆ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯ ಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ ಹಾಗೂ ರಾಜರಾಜ ಚೋಳ ಸೇರಿದಂತೆ ಹಲವು ಹೊಸ ಪ್ರತಿಭೆಗಳು ನಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಹರೀಶ್ ಜಲಗೆರೆ, “ಇದು ಕೇವಲ ಹಾರರ್ ಕಾಮಿಡಿ ಸಿನಿಮಾ ಮಾತ್ರವಲ್ಲ, ಒಂದು ಉತ್ತಮ ಸಂದೇಶವನ್ನೂ ಒಳಗೊಂಡಿದೆ. ಕೆಲ ಯುವಕರು ತುಂಟಾಟ ಮಾಡಲು ಹೋಗಿ ಹೇಗೆ ದೆವ್ವದೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂಬ ಕುತೂಹಲಕಾರಿ ಕಥೆಯನ್ನು ಚಿತ್ರದಲ್ಲಿ ಹೇಳಿದ್ದೇವೆ. ಹುಡುಗರ ಬದುಕಿನ ಕೆಲವು ಆಯ್ಕೆಗಳು, ಅವರು ಮಾಡುವ ಅಥವಾ ಮಾಡದ ಕಾಂಪ್ರಮೈಸ್‌ಗಳು ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಹಾಸ್ಯ ಮತ್ತು ಹಾರರ್ ಅಂಶಗಳೊಂದಿಗೆ ನಿರೂಪಿಸಿದ್ದೇವೆ” ಎಂದು ತಿಳಿಸಿದರು.

ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಜುಲೈ 10ರಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ಮುಂದಿನ ಕೆಲವು ದಿನಗಳಲ್ಲಿ ವಿಶೇಷ ಐಟಂ ಸಾಂಗ್ ಬಿಡುಗಡೆಯಾಗಲಿದ್ದು, ಜುಲೈ ಮೊದಲ ವಾರದಲ್ಲಿ ನಟ Kiccha Sudeep ಅವರಿಂದ ಚಿತ್ರದ ಟ್ರೈಲರ್ ಅನಾವರಣಗೊಳ್ಳುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಹೇಳಿದರು. ಚಿತ್ರ ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯಲ್ಲಿದ್ದು, ತಾವು ನಿರೀಕ್ಷಿಸಿದ್ದ ರೀತಿಯಲ್ಲೇ ಸಿನಿಮಾ ಮೂಡಿಬಂದಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಸಹ ನಿರ್ದೇಶಕ ಕೋಲಾರ ಸೀನು ಮಾತನಾಡಿ, ಹರೀಶ್ ಜಲಗೆರೆ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ಲೋಕಿ ತವಸ್ಯ, ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿಬರಲು ನಿರ್ದೇಶಕರ ಶ್ರಮವೇ ಪ್ರಮುಖ ಕಾರಣ ಎಂದು ಹೇಳಿದರು. ಆಂಟನಿದಾಸನ್ ಹಾಗೂ ಐಶ್ವರ್ಯ ರಂಗರಾಜನ್ ಹಾಡಿರುವ ಹೊಸ ಗೀತೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪೊಲೀಸ್ ಪಾತ್ರದಲ್ಲಿ ರಾಜೀವ್ ರೆಡ್ಡಿ ಕಾಣಿಸಿಕೊಂಡಿದ್ದು, ನಟಿ ನಕ್ಷತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರದ ಯುವ ಕಲಾವಿದರು ತಮ್ಮ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡು ಚಿತ್ರದ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದರು.

Spread the love

Continue Reading