Connect with us

Cinema News

ಹಾರರ್ ಜೊತೆಗೆ ಮನರಂಜನೆಯ ಪ್ಯಾಕೇಜ್‌ ‘ಪಂಚಮುಖಿ’ ಜೂನ್ 26ರಂದು ರಿಲೀಸ್

Published

on

ಎಸ್.ಪಿ. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಪಂಚಮುಖಿ’ ಸಿನಿಮಾ ಜೂನ್ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಂದ್ರು ಆಚಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೇ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಮತ್ತು ವಿಡಿಯೋ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿವೆ.

ಚಿತ್ರದ ಕುರಿತು ಮಾತನಾಡಿದ ಚಂದ್ರು ಆಚಾರ್, ಇದು ತಮ್ಮ ಮೊದಲ ನಿರ್ದೇಶನದ ಸಿನಿಮಾ ಎಂದು ತಿಳಿಸಿದರು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದ ಬಳಿಕ ‘ಪಂಚಮುಖಿ’ಯನ್ನು ನಿರ್ದೇಶಿಸಿರುವ ಅವರು, ಹಾರರ್ ಹಿನ್ನೆಲೆಯ ಜೊತೆಗೆ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ವಾಣಿಜ್ಯ ಅಂಶಗಳನ್ನು ಒಳಗೊಂಡ ಚಿತ್ರ ಇದಾಗಿದೆ ಎಂದರು. ಹಲವು ವರ್ಷಗಳ ಹಿಂದೆಯೇ ಆರಂಭಗೊಂಡಿದ್ದ ಈ ಸಿನಿಮಾ ಕೆಲವು ಕಾರಣಗಳಿಂದ ತಡವಾಗಿ ಬಿಡುಗಡೆಯಾಗುತ್ತಿದ್ದು, ಇದೀಗ ಜೂನ್ 26ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ತಂತ್ರಜ್ಞರು ಹಾಗೂ ಕಲಾವಿದರು ಅಪಾರ ಸಹಕಾರ ನೀಡಿದ್ದು, ಹಲವರು ಸಂಭಾವನೆ ಪಡೆಯದೆ ಕೆಲಸ ಮಾಡಿದ್ದಾರೆ ಎಂದು ಚಂದ್ರು ಆಚಾರ್ ಕೃತಜ್ಞತೆ ವ್ಯಕ್ತಪಡಿಸಿದರು. ಅರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವೀಣ್ ಪೂಜಾರಿ ಅವರ ಛಾಯಾಗ್ರಹಣ ಹಾಗೂ ಅರವಿಂದ್ ಜೆ.ಪಿ. ಮಲ್ಲು ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ ಎಂದರು.

ಚಿತ್ರದ ನಾಯಕಿ ಸ್ಪೂರ್ತಿ ಮನೋಹರ್, ಕಥೆಯೇ ತಮ್ಮನ್ನು ಆಕರ್ಷಿಸಿದ್ದು, ಇದು ತಮ್ಮ ಮೊದಲ ಸಿನಿಮಾ ಎಂಬ ಸಂತಸವನ್ನು ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಅರೋನ್ ಕಾರ್ತಿಕ್ ವೆಂಕಟೇಶ್, ಸಂಕಲನಕಾರ ಅರವಿಂದ್ ಜೆ.ಪಿ. ಮಲ್ಲು, ಕಲಾವಿದರಾದ ಪವನ್, ತೇಜಸ್, ಪೃಥ್ವಿ ಹಾಗೂ ವಿತರಕ ರಾಜು ಉಪಸ್ಥಿತರಿದ್ದು, ಚಿತ್ರದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

Spread the love

Continue Reading