Connect with us

Cinema News

ಮಹಾಭಾರತದ ಪಾತ್ರ ಆಧಾರಿತ ಕಥೆಯೊಂದಿಗೆ ಬರುತ್ತಿದೆ “ಶಿಖಂಡಿ”

Published

on

ಮಹಾಭಾರತದ “ಶಿಖಂಡಿ” ಪಾತ್ರದ ಸ್ಫೂರ್ತಿಯಲ್ಲಿ ಮೂಡಿಬಂದಿರುವ “ಶಿಖಂಡಿ” ಚಿತ್ರ ಇದೇ ಮೇ 15 ರಂದು ಬಿಡುಗಡೆಯಾಗುತ್ತಿದೆ. ಪೋಲಾ ಪ್ರವೀಣ್ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಗುರುಮೂರ್ತಿ ವಿ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ನಡೆದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಹಾಗೂ ಸಾಯಿ ಸತೀಶ್ ದೊಡ್ಡಯ್ಯ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಟ್ರೇಲರ್ ಹಾಗೂ ಹಾಡುಗಳ ಅನಾವರಣದ ಬಳಿಕ ಮಾತನಾಡಿದ ನಿರ್ದೇಶಕ ಗುರುಮೂರ್ತಿ, “ಶಿಖಂಡಿ” ಕಥಾಹಂದರವೇ ಚಿತ್ರದ ಪ್ರಮುಖ ಆಕರ್ಷಣೆ ಎಂದು ಹೇಳಿದರು. ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಯಾವುದೇ ಕೊರತೆ ಬಾರದಂತೆ ನಿರ್ಮಾಣ ಮಾಡಿದ್ದಾರೆ ಎಂದರು. ಯುವರಾಜ್ ನಾಯಕನಾಗಿ ಹಾಗೂ ಖ್ಯಾತಿ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇತರೆ ಭಾಷೆಗಳಲ್ಲೂ ತೆರೆಗೆ ಬರಲಿದೆ ಎಂದು ತಿಳಿಸಿದರು. “ಮಾರಕಾಸ್ತ್ರ” ನಂತರ ನಾನು ನಿರ್ದೇಶಿಸಿರುವ ಎರಡನೇ ಸಿನಿಮಾ ಇದಾಗಿದೆ ಎಂದರು.

ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಮಾತನಾಡಿ, ಹೋಟೆಲ್ ಉದ್ಯಮದಿಂದ ಚಿತ್ರರಂಗಕ್ಕೆ ಬಂದಿರುವುದಾಗಿ ಹೇಳಿದರು. ನಿರ್ದೇಶಕ ಗುರುಮೂರ್ತಿ ಎರಡು ತಿಂಗಳ ಕಾಲ ಕಥೆಗಾಗಿ ಸಂಪರ್ಕಿಸುತ್ತಿದ್ದು, ಕೊನೆಗೆ ಯಲ್ಲಮ್ಮ ತಾಯಿಯ ಹಾಡು ಕೇಳಿದ ಬಳಿಕ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡೆ ಎಂದರು. ಕುಟುಂಬ ಮತ್ತು ಚಿತ್ರತಂಡದ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದ್ದು, ತಾವು ಸಹ ಚಿತ್ರದಲ್ಲಿ ಅಭಿನಯಿಸಿದ್ದಾಗಿ ಹೇಳಿದರು.

ನಾಯಕ ಯುವರಾಜ್ ಗೌಡ ತಮ್ಮ ನಾಯಕನಾಗಬೇಕೆಂಬ ಕನಸು ಈ ಚಿತ್ರದ ಮೂಲಕ ನನಸಾಗಿದೆ ಎಂದರು. ನಾಯಕಿ ಖ್ಯಾತಿಗೆ ಇದು ಮೊದಲ ಚಿತ್ರವಾಗಿದ್ದು, ನಟಿ ನಿಖಿತಾಸ್ವಾಮಿ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. “ಬಿಗ್ ಬಾಸ್” ಖ್ಯಾತಿಯ ನೀತು, ವೇದ ಹಾಗೂ ಚಾಂದಿನಿ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ನಟ ರಾಘವೇಂದ್ರ ಮೊದಲ ಬಾರಿಗೆ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ಸಂಗೀತ ನಿರ್ದೇಶಕ ಮಂಜು ಕವಿ ಯಲ್ಲಮ್ಮ ಹಾಡಿನ ವಿಶೇಷತೆ ಕುರಿತು ಮಾತನಾಡಿದರು.

Spread the love

Continue Reading