Connect with us

Cinema News

“ಧೃತಿ” – ಸಮಾಜಕ್ಕೆ ಸಂದೇಶ ನೀಡುವ ವಿಭಿನ್ನ ಕಥೆಯ ಸಿನಿಮಾ

Published

on

ಸಮಾಜಮುಖಿ ಸಂದೇಶ ಹೊಂದಿರುವ “ಧೃತಿ” ಸಿನಿಮಾ ಇದೇ ಮೇ 8ರಂದು ತೆರೆಗೆ ಬರಲು ಸಜ್ಜಾಗಿದೆ. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಚಿತ್ರವನ್ನು ಉದ್ಯಮಿ ಜಗದೀಶ್ ನಿರ್ದೇಶಿಸಿದ್ದು, ಅವರ ಬಹುಕಾಲದ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಿರ್ದೇಶಕ ಜಗದೀಶ್ ಮಾತನಾಡುತ್ತ, “ಚಿಕ್ಕಂದಿನಿಂದಲೇ ಸಿನಿಮಾ ನಿರ್ದೇಶನದ ಆಸೆ ಇತ್ತು. ಆರು ವರ್ಷಗಳ ಹಿಂದೆ ಸ್ಕ್ರಿಪ್ಟ್ ಆರಂಭಿಸಿದ್ದು, ಆರಂಭದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇತ್ತು. ನಂತರ ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬಂದಿತು. ಚಿತ್ರೀಕರಣದ ಮಧ್ಯೆ ಛಾಯಾಗ್ರಾಹಕರು ನಿಧನರಾದ ಕಾರಣ ನಾನು ಸ್ವತಃ ಆ ಜವಾಬ್ದಾರಿ ಹೊತ್ತೆ” ಎಂದು ಹೇಳಿದರು. ಹೆಣ್ಣಿನ ಮೇಲಿನ ಶೋಷಣೆಯ ವಿಷಯವನ್ನೇ ಅಲ್ಲದೆ ಅದರ ಪರಿಹಾರವನ್ನೂ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಅವರು ತಿಳಿಸಿದರು.

ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಆಂಚಲ್, “ಇದು ನನ್ನ ಮೊದಲ ಸಿನಿಮಾ. ಮೊದಲ ಪ್ರಯತ್ನದಲ್ಲೇ ಬಲವಾದ ಪಾತ್ರ ಸಿಕ್ಕಿದ್ದು ಖುಷಿ. ‘ಧೃತಿ’ ಎನ್ನುವ ಪಾತ್ರ ಸಂಕಷ್ಟಗಳ ನಡುವೆಯೂ ಧೈರ್ಯದಿಂದ ಎದುರಿಸುವ ಹೆಣ್ಣುಮಗಳ ಕಥೆ” ಎಂದು ಹೇಳಿದರು. ನಾಯಕ ಪ್ರಶಾಂತ್ ಕೂಡ ತಮ್ಮ ಪಾತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ತಮ್ಮ ನಿರೀಕ್ಷೆಯಂತೆಯೇ ಪಾತ್ರ ಸಿಕ್ಕಿದೆ ಎಂದರು.

ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಚಿತ್ರಕ್ಕೆ ನೀಡಿದ ಸಂಗೀತ ವಿಶೇಷವಾಗಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ನಟರಾದ ಮನೋಜ್ ಕುಮಾರ್ ಹಾಗೂ ಮಧು ಮಂದಗೆರೆ ಕೂಡ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಹಲವು ಹೊಸ ಪ್ರತಿಭೆಗಳು ಸೇರಿಕೊಂಡಿರುವ “ಧೃತಿ” ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವಾಗಲಿದೆ ಎಂಬ ವಿಶ್ವಾಸವನ್ನು ತಂಡ ವ್ಯಕ್ತಪಡಿಸಿದೆ.

Spread the love

Continue Reading