Connect with us

Cinema News

ಅಖಾಡಕ್ಕೆ ಚಂದ್ರು ರೆಡಿ “ಫಾದರ್” ಎಂಬ ಯೂತ್ಸ್ ಹಾರ್ಟ್‌ ಟಚಿಂಗ್‌ ಸಿನಿಮಾ

Published

on

ನಿರ್ದೇಶಕ ಆರ್. ಚಂದ್ರು ಅವರ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರು ಆರ್.ಸಿ ಸ್ಟುಡಿಯೋಸ್ ಗೆ ಚಾಲನೆ ಕೊಟ್ಟು, “ಫಾದರ್‌” ಚಿತ್ರ ಅನಾವರಣ ಮಾಡಿಕೊಟ್ಟದ್ದು ಎಲ್ಲರಿಗೂ ಗೊತ್ತೇ ಇದೆ.

ಆರ್‌ ಸಿ ಸ್ಟುಡಿಯೋಸ್‌ ನ ‘ಫಾದರ್’ ಚಿತ್ರ ಎಲ್ಲಾ ಕೆಲಸಗಳನ್ನು ಪೂರೈಸಿ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಇತ್ತೀಚೆಗೆ ನಗರದ 5 ಸ್ಟಾರ್‌ ಹೋಟೆಲ್‌ ನಲ್ಲಿ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಅದ್ಧೂರಿಯಾಗಿ ರಿಲೀಸ್ ಆಯಿತು. ಇದನ್ನು ಬಿಡುಗಡೆ ಮಾಡಿದ ಮುಖ್ಯ ಅತಿಥಿ, ಚಂದ್ರು ಅವರ ‘ಫಾದರ್‌’. ಇದೊಂದು ಅಪರೂಪದ ಘಟನೆಯಾಯಿತು, ಎಲ್ಲರೂ ಸೂಪರ್‌ ಸ್ಟಾರ್‌ ಗಳನ್ನ ಕರೆದು ಬಿಡುಗಡೆ ಮಾಡಿಸುತ್ತಾರೆ, ಆದರೆ ಈ ಬಾರಿ ಆರ್‌ ಚಂದ್ರು, ಮುಖ್ಯ ಅತಿಥಿಯಾಗಿ ತನ್ನ ತಂದೆಯನ್ನೇ ಕರೆದು ಬಿಡುಗಡೆ ಮಾಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಪ್ಪ ಮಕ್ಕಳ ಬಾಂಧವ್ಯಕ್ಕೆ ಸಾಕ್ಷಿಯಾಗಿ, ಅಲ್ಲಿದ್ದವರೆಲ್ಲರ ಗಮನ ಸೆಳೆಯಿತು. ಅಲ್ಲಿ ಸೇರಿದ್ದವರೆಲ್ಲರಿಗೂ ಅವರವರ ತಂದೆ ನೆನಪಾದರು.

ಆರ್.ಚಂದ್ರು ಆರ್‌ ಸಿ ಸ್ಟುಡಿಯೋಸ್‌ ಸಂಸ್ಥೆಯ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸುವ ನಿಟ್ಟಿನಲ್ಲಿ, ಈ ಥೀಮ್‌ ವಿಡಿಯೋವನ್ನು ನೋಡಿದವರೆಲ್ಲರೂ ಚಪ್ಪಾಳೆ ತಟ್ಟಿ ಗೆಲುವಿನ ಸೂಚನೆ ಸೂಚಿಸಿದರು. ‘ಫಾದರ್‌’ ತನ್ನೆಲ್ಲಾ ಕೆಲಸಗಳನ್ನು ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ‘ಕಬ್ಜಾ’ ಚಂದ್ರು ಆಗಿ ಭಾರತೀಯ ಚಿತ್ರರಂಗವನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದ ಚಂದ್ರು, ಕನ್ನಡ ಪ್ರೇಕ್ಷಕರಿಗೆ ಮತ್ತು ‘ತಾಜ್‌ ಮಹಲ್‌’, ‘ಚಾರ್‌ ಮಿನಾರ್‌’ ರೀತಿಯ ಎಮೋಷನ್‌ ಸಿನಿಮಾ ಕೊಡಲು, ನಿರ್ದೇಶಕ ರಾಜ್‌ ಮೋಹನ್‌ ಗೆ ಒಪ್ಪಿಸಿದ್ದಾರೆ. ತಾನಾಯಿತು ತನ್ನ ಕೆಲಸವಾಯಿತು. ದೊಡ್ಡ ದೊಡ್ಡ ಪ್ರಯತ್ನಗಳಿಗೆ ಕೈ ಹಾಕುವ ಚಂದ್ರು ಅಂದರೆ ಹೊಸಬರಿಗೆ ಅವಕಾಶ ಕೊಡುವ ಕಾರಣಕ್ಕೆ, ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ಅಭಿಮಾನ.

‘ಫಾದರ್’ ಅಂದಾಕ್ಷಣ, ಪ್ರತಿಯೊಬ್ಬರಿಗೂ ನೆನಪಾಗೋದೇ ಅಪ್ಪ, ಬಾಲ್ಯದ ನೆನಪು. ನಮ್ಮ ಬದುಕು ರೂಪಿಸುವ ಜೀವ ಅಪ್ಪ. ಅಂತಹ ಅಪ್ಪನ ಕುರಿತು ಆರ್‌ ಚಂದ್ರು ಅಪರೂಪದ ಕಥಾ ಹಂದರ ಹೊಂದಿರುವ, ಅಪ್ಪ ಮಗನ ವ್ಯಾಲ್ಯೂ ತಿಳಿಸುವ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ.

‘ಫಾದರ್‌’ ಭಾವುಕ ಪಯಣಕ್ಕೆ ಕರೆದೊಯ್ಯುವ, ಕಣ್ಣಂಚಲ್ಲಿ ನೀರು ತರೆಸುವ, ಹೃದಯದ ಲಬ್‌ ಡಬ್ ಹೆಚ್ಚಿಸುವ, ಅಪ್ಪನ ಬೆಲೆ ತಿಳಿಸುವ, ಚಿತ್ರ ಆಗಲಿದೆ ಎನ್ನುವ ಸೂಚನೆ, ಈ ಥೀಮ್‌ ವಿಡಿಯೋ ನೋಡಿದವರಿಗೆ ಗೊತ್ತಾಗುತ್ತಿದೆ. ತಂದೆಯ ಪಾತ್ರದಲ್ಲಿ ಪ್ರಕಾಶ್‌ ರಾಜ್‌, ಮಗನ ಪಾತ್ರದಲ್ಲಿ ಡಾರ್ಲಿಂಗ್‌ ಕೃಷ್ಣ, ಹಾಗೂ ಆರ್‌ ಚಂದ್ರು ಸುಪರ್ದಿ, ಈ ಅಪರೂಪದ ಕಾಂಬೋದಲ್ಲಿ ಬರುತ್ತಿರುವ ‘ಫಾದರ್‌’, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಆರ್‌ ಚಂದ್ರು ಚಿತ್ರ ಅಂದ ಮೇಲೆ ನಿರ್ಮಾಣವಿರಲಿ, ನಿರ್ದೇಶನವಿರಲಿ, ಅಲ್ಲಿ ಅಚ್ಚುಕಟ್ಟುತನ ಇದ್ದೇ ಇರುತ್ತದೆ. ‘ಲವ್‌ ಮಾಕ್ಟೈಲ್‌’ ಜೋಡಿ, ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ‘ಟಗರು ಪಲ್ಯ’ ಖ್ಯಾತಿಯ ನಾಗಭೂಷಣ್‌ ಕೂಡ ಮುಖ್ಯ ಪಾತ್ರದಲ್ಲಿರುವುದು. ಸಿನಿಮಾದ ಮೇಲೆ ಎಲ್ಲರಿಗೂ ಅಭಿಮಾನ, ಕ್ರೇಜ್ ಹೆಚ್ಚಿಸಿದೆ.

ಆರ್‌ ಸಿ ಸ್ಟುಡಿಯೋಸ್‌ ನಿರ್ಮಾಣದ ಸಿನಿಮಾ ಅಂದ ಮೇಲೆ ಎಲ್ಲಾ ಭಾಷೆಯಲ್ಲೂ ಬರುವುದು ಖಚಿತ, ಇದೊಂದು ಸೂಪರ್‌ಗುಡ್‌ ಎಮೋಷನಲ್ ಕಂಟೆಂಟ್‌ ಸಿನಿಮಾ.‌ ಅದರಲ್ಲೂ ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟ. ಡಾರ್ಲಿಂಗ್ ಕೃಷ್ಣ ಕೂಡ ಈ ಚಿತ್ರದಿಂದ ಬೇರೆ ಭಾಷೆಗೂ ಪರಿಚಯವಾಗುತ್ತಿದ್ದಾರೆ.

‘ಫಾದರ್’, ನಮ್ಮ ಹೆಮ್ಮೆಯ ನಗರ ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಹಾಗೂ ವಾರಣಾಸಿಯಲ್ಲೂ ಚಿತ್ರೀಕರಣಗೊಂಡಿದೆ.

ಆರ್.ಸಿ.ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಾಜಮೋಹನ್‌ ನಿರ್ದೇಶನ ಮಾಡಿದ್ದಾರೆ, ಸುಜ್ಞಾನ್ ಛಾಯಾಗ್ರಹಣ, ನಕುಲ್‌ ಅಭಯಂಕರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕನ್ನಡಿಗರಿಗೆ ಸದಭಿರುಚಿಯ ಮನ ಮುಟ್ಟುವ ಅಪ್ಪ ಮಗನ ಭಾಂದವ್ಯದ ಸುಂದರ ಚಿತ್ರ ನೀಡಲು ಆರ್‌ ಸಿ ಸ್ಟುಡಿಯೋಸ್‌ ಸಜ್ಜಾಗಿದೆ. ಆರ್‌ ಚಂದ್ರು ಅಭಿಮಾನಿಗಳು ಬಹುದೊಡ್ಡ ಗ್ಯಾಪ್‌ ನ ನಂತರ ಅವರ ನಿರ್ಮಾಣದ ಚಿತ್ರಕ್ಕೆ ಕಾಯುತ್ತಿರುವುದು ಸುಳ್ಳಲ್ಲ. ‘ಫಾದರ್‌’ ಚಿತ್ರ ಬೇಗನೇ ಬಿಡುಗಡೆಯಾಗಲಿ.

ಪ್ರಕಾಶ್‌ ರಾಜ್‌ ಡಾರ್ಲಿಂಗ್‌ ಕೃಷ್ಣ ಅಭಿನಯ, ಆರ್‌ ಚಂದ್ರು ನಿರ್ಮಾಣದ ಈ ಚಿತ್ರಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

[ ‘ಕಬ್ಜ’ ಬಳಿಕ ಚಂದ್ರು ನಿರ್ದೇಶನದ ಸಿನಿಮಾ ಯಾವಾಗ ಗೊತ್ತಾ ?* ]

Mr.ಆರ್‌ ಚಂದ್ರು ನಿಮ್ಮಿಂದ ಕನ್ನಡ ಚಿತ್ರರಂಗ ಬಹುದೊಡ್ಡ ಚಿತ್ರವನ್ನು ನಿರೀಕ್ಷಿಸುತ್ತಿದೆ. ಬೇಗನೇ ತಮ್ಮ ನಿರ್ದೇಶನದ ಚಿತ್ರ ಅನೌನ್ಸ್‌ ಮಾಡಲಿ ಎಂಬುದೇ ಎಲ್ಲರ ಆಶಯ, ‘ತಾಜ್‌ ಮಹಲ್‌’ ನಿಂದ 13 ಚಿತ್ರಗಳನ್ನ ನಿರ್ದೇಶನ ಮಾಡಿರುವ ಚಂದ್ರು ಸಿಂಪಲ್‌ ಮ್ಯಾನ್.‌

100 ರೂಪಾಯಿಂದ ನೂರು ಕೋಟಿ ಸಿನಿಮಾ ನಿರ್ದೇಶನ ಮಾಡಿದ ಎದೆಗಾರಿಕೆಗೆ, ಎಲ್ಲರಿಗೂ ಸ್ಪೂರ್ತಿಯಾಗುತ್ತೀರಿ ನೀವು, ‘ಕಬ್ಜ’ ಬಿಡುಗಡೆಯಾಗಿ ಪ್ರಪಂಚದಾದ್ಯಂತ 4000 ಸ್ಕ್ರೀನ್ ಗಳಲ್ಲಿ ರಾರಾಜಿಸಿದ್ದು, ಇನ್ನೂ ಎಲ್ಲರ ಕಣ್ಣ ಮುಂದೆಯೇ ಇದೆ. ತಾನೇ ನಿರ್ಮಾಪಕ, ನಿರ್ದೇಶಕನಾಗಿ, ಬಹುದೊಡ್ಡ ಚಾಲೆಂಜ್‌ ತೆಗೆದುಕೊಂಡು, ಪ್ರಪಂಚದಾದ್ಯಂತ ಚಿತ್ರ ಬಿಡುಗಡೆ ಮಾಡುವುದು, ಅಷ್ಟು ಸುಲುಭದ ಮಾತಲ್ಲ. ಇಂತಹ ಚಾಲೆಂಜ್‌ ಗಳನ್ನು ತೆಗೆದುಕೊಳ್ಳುವ ಎದೆಗಾರಿಕೆಯ ನಿರ್ದೇಶಕ ನೀವು.

ಎಷ್ಟೋ ಹಲವಾರು ಚಿತ್ರಗಳನ್ನು ನಿರ್ದೇಶಿಸಿ, ಒಂದಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ, ಹೊಸಬರಿಗೆ ಅವಕಾಶಗಳನ್ನು ಕೊಟ್ಟು, ಹತ್ತು ವರ್ಷಗಳ ಹಿಂದೆಯೇ, ಕನ್ನಡದ ಬಾವುಟವನ್ನು ತೆಲುಗಿನಲ್ಲಿ ಹಾರಿಸಿದವರು ನೀವು. ‘ಕಬ್ಜ’ ಅದೇನೇ ಇರಲಿ ಅದರ ಮೇಕಿಂಗ್‌ ಭಾರತೀಯ ಚಿತ್ರರಂಗದ ಎಲ್ಲರನ್ನೂ ಒಮ್ಮೆ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಇತ್ತೀಚಿಗೆ ಕನ್ನಡದ ಕಬ್ಜವನ್ನು, ಅದೆಷ್ಟೋ ಬೇರೆ ಭಾಷೆಯ ನಿರ್ದೇಶಕರುಗಳು, ಸ್ಪೂರ್ತಿಯಾಗಿ ತೆಗೆದುಕೊಂಡಿದ್ದು, ಪ್ರತೀ ಕನ್ನಡಿಗನಿಗೂ ಗೊತ್ತು. ಇದು ನಮ್ಮ ಕನ್ನಡದ ನಿರ್ದೇಶಕನ ತಾಕತ್ತು. ಸಿನಿಮಾ ಅಂದ ಮೇಲೆ ಒಂದಷ್ಟು ಜನಕ್ಕೆ ರುಚಿಸಬಹುದು, ಒಂದಷ್ಟು ಜನಕ್ಕೆ ರುಚಿಸದೇನೂ ಇರಬಹುದು. ವ್ಯಾಪಾರದಲ್ಲಿ ‘ಕಬ್ಜ’ ಬಾಕ್ಸ್‌ ಆಪೀಸ್‌ ನಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ಚಂದ್ರು ವೇದಿಕೆಯಲ್ಲೇ ಹಂಚಿಕೊಂಡಿದ್ದಾರೆ. ಏನೇ ಆದರೂ ನಮ್ಮ ಕನ್ನಡದ ನಿರ್ದೇಶಕರುಗಳು ಭಾರತೀಯ ಚಿತ್ರರಂಗದತ್ತ ಮುಖ ಮಾಡುತ್ತಿರುವುದು. ಪ್ರತಿ ಪ್ರೇಕ್ಷಕನಿಗೂ ಖುಷಿಯ ವಿಷಯ.

ಚಂದ್ರು ಕಬ್ಜ ಚಿತ್ರದ ಮೇಕಿಂಗಿಗೆ ಅದು ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ನೀವಂತೂ ಮೇಕಿಂಗ್‌ ನಲ್ಲಿ ಭಾರತೀಯ ಚಿತ್ರರಂಗದ ಟಾಪ್‌ ನಿರ್ದೇಶಕರುಗಳ ಸಾಲಿನಲ್ಲಿ ಇದ್ದಿರ. ನಿಮ್ಮಂತಹ ದೊಡ್ಡ ಪ್ರಯತ್ನ ಮಾಡುವ ನಿರ್ದೇಶಕರು, ಸುಮ್ಮನೇ ಕೂರುವುದು ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟ ಎಂದರೆ ತಪ್ಪಾಗಲ್ಲ. ನೀವು ಬಹುದೊಡ್ಡ ಕನಸಿನೊಂದಿಗೆ, ಮತ್ತೊಂದು ದೊಡ್ಡ ಪ್ರಯತ್ನಕ್ಕೆ ತಯಾರಾಗುತ್ತಿರುವ ಸುದ್ಧಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಚಂದ್ರು ಈ ಬಾರಿ ಐದು ನೂರು ಕೋಟಿಯ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು, ದಟ್ಟವಾಗಿದೆ. ಇದಕ್ಕೆ ಖಂಡಿತಾ ಕನ್ನಡ ಚಿತ್ರರಂಗ ಹೆಮ್ಮೆ ಪಡುತ್ತದೆ. ಅದು ಯಾವಾಗ ಎಂಬುದು ನಿಮ್ಮ ಖಾತ್ರಿಯಾಗಲಿ, ಬೇಗನೇ ನಿರ್ದೇಶನ ಮಾಡಿ. ನಿಮ್ಮಂತಹ ನಿರ್ದೇಶಕರಿಂದ ನೂರಾರು ಕುಟುಂಬಗಳು ಬದುಕುತ್ತವೆ. ಸ್ಟಾರ್‌ ಗಳ ಸಿನಿಮಾ ನೋಡುಲು ಕಾಯುವ ಪ್ರೇಕ್ಷಕರಿದ್ದಾರೆ. ಸ್ಟಾರ್‌ ಡೈರೆಕ್ಟರ್‌ ಗಳ ಸಿನಿಮಾ ನೋಡುವ ಪ್ರೇಕ್ಷಕರು ಇದ್ದಾರೆ. ನಿಮ್ಮ ಸಂಪಾದನೆ, ನಿಮ್ಮ ಚಿತ್ರಗಳನ್ನು ಇಷ್ಟ ಪಡುವ ಪ್ರೇಕ್ಷಕರು, ಅವರ್ಯಾರು ನಿಮ್ಮ ಮನೆ ಮುಂದೆ ಬಂದು ಧರಣಿ ಮಾಡಲ್ಲ. ಆದರೆ, ನೀವು ಚಿತ್ರ ಮಾಡುತ್ತೀರ ಅಂದ್ರೆ ಖಂಡಿತಾ ಖುಷಿ ಪಡುತ್ತಾರೆ.

Mr.ಚಂದ್ರು ನಿಮ್ಮ ಮುಂದಿನ ಚಿತ್ರ ನಿರ್ದೇಶನ ಯಾವಾಗ? ಬಹುಬೇಗನೇ ಅನೌನ್ಸ್‌ ಮಾಡಿ, ‘ಕಬ್ಜ’ ನಿರ್ದೇಶಕನ ಮೇಕಿಂಗ್‌ ನೋಡಲು ಎಲ್ಲರೂ ಕಾಯುತ್ತಿದ್ದಾರೆ

Spread the love

Continue Reading
Click to comment

Leave a Reply

Your email address will not be published. Required fields are marked *