Connect with us

Cinema News

*ಥಿಂಕ್ ಮ್ಯೂಸಿಕ್ ಕೈ ಸೇರಿದ ಪೀಟರ್ ಆಡಿಯೋ ಹಕ್ಕು

Published

on

ಒಂದು ಸಿನಿಮಾಗೆ ಇನ್ವಿಟೇಷನ್ ಎಂದರೆ ಹಾಡುಗಳು. ಹಾಡು ಹಿಟ್ ಆದರೆ ಸಿನಿಮಾನೂ ಹಿಟ್ ಎಂಬ ಮಾತಿದೆ. ಈ ನಿಟ್ಟಿನಲ್ಲಿ ಪೀಟರ್ ಸಿನಿಮಾ ಸಂಗೀತಪ್ರಿಯರಿಗೆ ಒಳ್ಳೆ ಹಾಡುಗಳನ್ನು ನೀಡುವ ತವಕದಲ್ಲಿದೆ. ಅದರ ಮೊದಲ ಭಾಗವಾಗಿ ಮಲಯಾಳಂ ನಿಂದ ಪ್ರಣವಂ ಸಸಿ ಮತ್ತು ಬಾಲಿವುಡ್ ಖ್ಯಾತ ಗಾಯಕ ಅಜಯ್ ಗೋಗವಾಲೆ ಅವರನ್ನು ಕರೆಸಿ ಪೀಟರ್ ಗಾಗಿ ಹಾಡಿಸಲಾಗಿದೆ. ಹೀಗಿದ್ಮೇಲೆ ಪೀಟರ್ ಗಾನಬಜಾನಗಳ‌ ಮೇಲೆ ನಿರೀಕ್ಷೆ ತುಸು ಹೆಚ್ಚಿದೆ. ಈಗ ಚಿತ್ರ ತಂಡ ದೊಡ್ಡ ಸುದ್ಧಿಯೊಂದನ್ನ ಹೊರಹಾಕಿದೆ, ದಕ್ಷಿಣ ಚಿತ್ರ ರಂಗದ ಪ್ರತಿಷ್ಠಿತ ಆಡಿಯೋ ಲೇಬಲ್ “ಥಿಂಕ್ ಮ್ಯೂಸಿಕ್” ಪೀಟರ್ ಹಾಡುಗಳನ್ನು ಮೆಚ್ಚಿಕೊಂಡು ಆಡಿಯೋ ರೈಟ್ಸ್ ತಮ್ಮದಾಗಿಸಿಕೊಂಡಿದೆ.

ಋತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನವಿದ್ದು, ನಾಗಾರ್ಜುನ ಶರ್ಮಾ , ತ್ರಿಲೋಕ ತ್ರಿವಿಕ್ರಮ, ಸುಕೀರ್ತ್ ಶೆಟ್ಟಿ ಸಾಹಿತ್ಯವಿದೆ.ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಪೀಟರ್ ಚಿತ್ರದ ಹಾಡುಗಳು “ಥಿಂಕ್ ಮ್ಯೂಸಿಕ್” ನಲ್ಲಿ ದೊರೆಯಲಿವೆ. ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.”ಥಿಂಕ್ ಮ್ಯೂಸಿಕ್” ನ ಸಹಯೋಗ ಚಿತ್ರ ತಂಡಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ.

ಸುಕೇಶ್ ಶೆಟ್ಟಿ ಸಾರಥ್ಯದಲ್ಲಿ ಪೀಟರ್ ಸಿನಿಮಾ ಮೂಡಿ ಬರುತ್ತಿದೆ. ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಚೆಂಡೆ ಮೇಳದ ಕಂಟೆಂಟ್ ಕೂಡ ಇರಲಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ವೃದ್ಧಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರವಿ ಹಿರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ತಮಿಳಿನಲ್ಲಿ ಸಿನಿಮಾ ಮೂಡಿ ಬರಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *