Cinema News
ಅನಂತ್ನಾಗ್ಗಾಗಿ ‘ವೀಕೆಂಡ್’ ಸಿನಿಮಾ ನೋಡಬೇಕು

ಇದೇ ಶುಕ್ರವಾರ ಬಿಡುಗಡೆಯಾಗುತ್ತಿರುವ ವಿಕೇಂಡ್ ಸಿನಿಮಾದಲ್ಲಿನ ಅನಂತ್ ನಾಗ್ ಪಾತ್ರ ಸಖತ್ ಆಗಿದ್ದು, ಅದಕ್ಕಾಗಿ ಸಿನಿಮಾ ನೋಡಲೇ ಬೇಕು ಎನ್ನುತ್ತಾರೆ ನಿರ್ದೇಶಕರು.

ಟೆಕ್ಕಿಗಳ ಮೋಜಿನ ಜೀವನ, ಮತ್ತು ಅದರಿಂದ ಅವರುಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಈ ಚಿತ್ರದಲ್ಲಿದ್ದು, ಇದರ ನಡುವೆ ಅನಂತ್ನಾಗ್ ಅವರ ಪಾತ್ರ ಬಹಳ ವಿಶೇಷವಾಗಿದೆಯಂತೆ. ನಾಯಕನ ತಾತನಾಗಿ ಮೊಮ್ಮಗನಿಗೆ ಜೀವನದ ಪಾಠವನ್ನು ಹೇಳಿಕೊಡುವ ಪಾತ್ರ ಇದಾಗಿದೆ.
ಮೊಮ್ಮಗನ ಜತೆಗೆ ಇಂದಿನ ಯುವ ಜನತೆಗೂ ಜೀವನದ ಸಮಸ್ಯೆಯನ್ನು ಎದುರಿಸುವ ಬಗ್ಗೆಯೂ ಅವರು ಹೇಳುತ್ತಾರೆ. ವಿಶೇಷ ಎಂದರೆ ಅನಂತ್ನಾಗ್ ನಟಿಸಲು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ, ಈ ಸಿನಿಮಾವನ್ನು ನಿರ್ದೇಶಕರು ಮಾಡುತ್ತಿರಲಿಲ್ಲವಂತೆ.

Continue Reading