Connect with us

Cinema News

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಪ್ಯಾರಾ ನಾರ್ಮಲ್ ಹಾಗೂ ಹಾರಾರ್ ಜಾನಾರ್ ನ ಚಿತ್ರ “ಕಮರೊ2” ಆಗಸ್ಟ್ 1 ರಂದು ತೆರೆಗೆ .

Published

on

ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್ ಜಾನರ್ ನ “ಕಮರೊ2” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು,‌ ಭಾರಿ ಕುತೂಹಲ ಮೂಡಿಸಿದೆ. ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಪವನ್ ಗೌಡ ನಿರ್ಮಾಣದ ಈ ಚಿತ್ರವನ್ನು ಎ.ಪರಮೇಶ್ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಮೊದಲು ಮಾತನಾಡಿದ ನಿರ್ದೇಶಕ ಪರಮೇಶ್, ನಾನು ಈ ಹಿಂದೆ ಕನ್ನಡದಲ್ಲಿ ಮೊದಲ ಬಾರಿ ಅಪರೂಪ ಎನ್ನಬಹುದಾದ ಪ್ಯಾರಾ ನರ್ಮಲ್ ಜಾನರ್ ನ “ಕಮರೊಟು ಚೆಕ್ ಪೋಸ್ಟ್” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಆ ಚಿತ್ರ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಈಗ ಸೀಕ್ವೆಲ್ ಆಗಿ “ಕಮರೊ2” ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದು ಸಹ ಹಾರಾರ್ ಕಥೆಯೊಂದಿಗೆ ಪ್ಯಾರಾ ನಾರ್ಮಲ್ ಜಾನರ್ ನ ಚಿತ್ರವಾಗಿದೆ. ಚಿತ್ರಕ್ಕೆ ಮಂಗಳೂರಿನ ಉಡುಪಿ, ಚಿಕ್ಕ ಮoಗಳೂರು ಸುತ್ತಮುತ್ತಲ್ಲಿನಲ್ಲಿ ಚಿತ್ರೀಕರಣ ಆಗಿದೆ. ಚಿತ್ರದ ಕಥೆ ಕೇಳಿದ ನಿರ್ಮಾಪಕ ಪವನ್ ಗೌಡ ನಿರ್ಮಾಣಕ್ಕೆ ಮುಂದಾದರು. ಮೊದಲ ಬಾರಿಗೆ ವಿಭಿನ್ನಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಈವರೆಗೂ ಮಾಡಿರದ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಕಥೆ ಹೇಳುವಾಗ ಒಪ್ಪಿಕೊಳ್ಳುತ್ತಾರೊ? ಇಲ್ಲವೊ? ಎಂಬ ಭಯವಿತ್ತು. ಆದರೆ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡರು. ಕನ್ನಡದ “ಮಿಥುನ ರಾಶಿ” ಸೇರಿದಂತೆ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿ ಜನಪ್ರಿಯರಾಗಿರುವ ಅನಂತಸ್ವಾಮಿ, ತಮ್ಮ ಅಭಿನಯದ ಮೂಲಕ ಜನರ ಮನಸನ್ನು ಗೆದ್ದಿದಾರೆ. “ಚೋ ಮಂತರ್” ಸಿನಿಮಾದ ಮೊಗ್ರಾ ಪತ್ರದಿಂದಾಗಿ ಚಿರಪರಿಚಿತರಾಗಿರುವ ರಜನಿ ಭಾರದ್ವಾಜ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಇದ್ದಾರೆ. ಎ.ಟಿ. ರವೀಶ್ ಸಂಗೀತ ನಿರ್ದೇಶನ ಹಾಗೂ ಪ್ರಜ್ವಲ್ ಗೌಡ ಛಾಯಾಗ್ರಹಣವಿರುವ ಈ ಚಿತ್ರ ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವ ಹಾಗೂ ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರ ಎಂದು ಹೇಳುತ್ತಾ ನಿರ್ದೇಶಕರು, ಆಗಸ್ಟ್ 1 ರಂದು ರಾಜ್ಯದಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಪ್ರಿಯಾಂಕ ಉಪೇಂದ್ರ ಅವರು ನಿರ್ದೇಶಕ ಪರಮೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಗುಟಮಟ್ಟದಲ್ಲಂತೂ ಯಾವುದೇ ಭಾಷೆಗಳ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಬಹಳ ಉತ್ತಮಾವಾಗಿ ಚಿತ್ರಿಸಿದ್ದಾರೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು. ನನ್ನ ಪಾತ್ರ ಕೂಡ ಇಲ್ಲಿ ವಿಭಿನ್ನವಾಗಿದೆ ಎಂದರು ನಟಿ ಪ್ರಿಯಾಂಕ ಉಪೇಂದ್ರ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನನಗೆ ಪರಮೇಶ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಖುಷಿಯಾಗಿ ನಟಿಸಲು ಒಪ್ಪಿಕೊಂಡೆ. ಪ್ರೇಕ್ಷಕರು ಕೂಡ ನನ್ನ ಪಾತ್ರ ಒಪ್ಪಿಕೊಳ್ಳುವ ಭರವಸೆ ಇದೆ ಎಂದು ನಟ ಅನಂತ ಸ್ವಾಮಿ ತಿಳಿಸಿದರು.

ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಚಿತ್ರೀಕರಣದ ಅನುಭವ ತುಂಬಾ ಚೆನ್ನಾಗಿತ್ತು ಎಂದು ನಟಿ ರಜನಿ ಭಾರದ್ವಾಜ್ ಹೇಳಿದರು.

ನನ್ನನ್ನು ಈ ಚಿತ್ರದಲ್ಲಿ ನೀವು ಊಹೆ ಮಾಡುವುದು ಸ್ವಲ್ಪ ಕಷ್ಟ. ಆ ರೀತಿಯ ಪಾತ್ರ. ಈವರೆಗೂ ಮಾಡಿರದ ಪಾತ್ರ ಕೂಡ ಎಂದರು ನಟ ನೀನಾಸಂ ಅಶ್ವಥ್.

ತಂತ್ರಜ್ಞರು ಹಾಗೂ ಕಲಾವಿದರು ನೀಡಿದ ಪ್ರೋತ್ಸಾಹವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಅವರಿಗೆ ನನ್ನ ಧನ್ಯವಾದ. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ರವಿಚಂದ್ರನ್ ಅವರ ಅಭಿಮಾನಿ. ಹಾಗಾಗಿ ನಮ್ಮ ಸಂಸ್ಥೆಗೆ ಕನಸು ಪಿಕ್ಚರ್ಸ್ ಎಂದು ಹೆಸರಟ್ಟಿದ್ದೇನೆ. ಆಗಸ್ಟ್ 1 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರ ಬೆಂಬವಿರಲಿ ಎಂದರು ನಿರ್ಮಾಪಕ ಪವನ್ ಗೌಡ. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ.ಟಿ.ರವೀಶ ಮಾಹಿತಿ ನೀಡಿದರು. ನಟರಾದ ನಾಗೇಂದ್ರ ಅರಸ್, ರಕ್ಷಿತ್, ಪವನ್ ಎಸ್ ನಾರಾಯಣ್, ಮಹೇಶ್ ರಾಜ್, ಬೇಬಿ ಖುಷಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ವಿ. ಎಫ್. ಎಕ್ಸ್ .ತಂತ್ರಜ್ಞ ಸಂಗಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Spread the love

Continue Reading
Click to comment

Leave a Reply

Your email address will not be published. Required fields are marked *