Connect with us

Cinema News

ಗುರಿ ಟೀಸರ್ ಮತ್ತು ಹಾಡುಗಳ ಲೋಕಾರ್ಪಣೆ

Published

on

80ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅಭಿನಯಸಿದ್ದ ಗುರಿ ಚಿತ್ರವು ಸೂಪರ್ ಹಿಟ್ ಆಗಿತ್ತು. 4 ದಶಕದ ತರುವಾಯ ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಸಿದ್ದಗೊಂಡಿದೆ. ’ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿ ಹೇಳಿಕೊಂಡಿದೆ. ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ಸೆಲ್ವಂ ಮಾದಪ್ಪನ್ ಸಿನಿಮಾಕ್ಕೆ ಕಥೆ,ಚಿತ್ರಕತೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಲಹರಿವೇಲು ಹೊಸದಾಗಿ ಸ್ಥಾಪನೆ ಮಾಡಿರುವ ’ಎಂಆರ್‌ಟಿ ಮ್ಯೂಸಿಕ್’ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಪ್ರಚಾರದ ಮೊದಲ ಹಂತವಾಗಿ ಪಳನಿ.ಡಿ.ಸೇನಾಪತಿ ಸಂಗೀತ ಸಂಂಯೋಜನೆಯ ಎರಡು ಹಾಡುಗಳು ಹಾಗೂ ಟೀಸರ್ ಅನಾವರಣ ಕಾರ್ಯಕ್ರಮವು ಎಂಎಂಬಿ ಲೆಗೆಸಿದಲ್ಲಿ ಅದ್ದೂರಿಯಾಗಿ ನಡೆಯಿತು.

ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಚಿಣ್ಣರುಗಳಾದ ಮಹಾನಿಧಿ, ಜೀವಿತ್‌ಭೂಷಣ್ ಉಳಿದಂತೆ ಅಚ್ಯುತಕುಮಾರ್, ಜಯಶ್ರೀ, ಉಗ್ರಂಮಂಜು, ಸಂದೀಪ್‌ಮಲಾನಿ, ಮನೋಹರ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸೆಲ್ವಂ ಮಾದಪ್ಪನ್ ಸಿನಿಮಾವು ನೈಜ ಘಟನೆಯನ್ನು ಆಧರಿಸಿದೆ. ಒಮ್ಮೆ ಕೋಲಾರದ ತೇರಳ್ಳಿ ಬೆಟ್ಟದ ಕಡೆ ಹೋಗಿದ್ದಾಗ, ಅಲ್ಲಿ ಸರ್ಕಾರಿ ಶಾಲೆ ಮುಚ್ಚಲಾಗಿತ್ತು. ಮಕ್ಕಳು ಶಿಕ್ಷಕರೊಂದಿಗೆ ಕೆರೆಯಲ್ಲಿ ಆಟವಾಡುತ್ತಿದ್ದರು. ಸ್ಥಳೀಯರೊಂದಿಗೆ ವಿಚಾರಣೆ ನಡೆಸಿದಾಗ, ಒಂದಷ್ಟು ಅಂಶಗಳು ಸಿಕ್ಕಿತ್ತು. ಅದನ್ನೇ ಚಿತ್ರಕತೆಗೆ ಬಳಸಲಾಗಿದೆ. ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂದವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷಗಳು. ಒಂದು ಹಂತದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪುತ್ತದೆ. ವಿಷಯ ತಿಳಿದ 3ನೇ ತರಗತಿಯ ಇಬ್ಬರು ಬುದ್ದಿವಂತ, ಧೈರ್ಯಶಾಲಿ ವಿದ್ಯಾರ್ಥಿಗಳು ಇದರ ವಿರುದ್ದ ಹೋರಾಟ ನಡೆಸಿ, ಹೇಗೆ ಸಪಲರಾಗುತ್ತಾರೆ ಎಂಬುದು ಒಂದು ಏಳೆಯ ಸಾರಾಂಶ. ಹವಮಾನ, ಮಕ್ಕಳಿಂದ ಸಿನಿಮಾ ಮುಗಿಯುವುದು ತಡವಾಯಿತು. ನಮ್ಮ ಕೆಲಸ ಮುಗಿದಿದೆ. ಇನ್ನೇನಿದ್ದರೂ ನೀವುಗಳು ಹರಸಬೇಕೆಂದು ಕೋರಿಕೊಂಡರು.

ಟೈಟಲ್ ನೋಡಿದಾಗ ಅಣ್ಣಾವ್ರ ಸಿನಿಮಾದ ಹೆಸರು ಕಣ್ಣ ಮುಂದೆ ಬರುತ್ತದೆ. ಸೆಲ್ವಂ ಅವರು ಛಾಯಾಗ್ರಾಹಕರಾಗಿ ಹದಿನೈದು ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರತಿ ದೃಶ್ಯದಲ್ಲಿ ಅವರ ಚಾಕಚಕ್ಯತೆ ಕಂಡು ಬರುತ್ತದೆ. ಖಂಡಿತ ಚಿತ್ರವು ಯಶಸ್ಸು ಕಾಣುವುದಲ್ಲದೆ ಪ್ರಶಸ್ತಿ ಬರುತ್ತದೆ. ಪಳನಿ ಸೇನಾಪತಿ ಗೀತೆಗಳು ಚೆನ್ನಾಗಿದೆ. ಅವರಿಗೆ ಸರಸ್ವತಿ ಒಲಿದು, ಲಕ್ಷೀ ಹತ್ತಿರ ಬರುತ್ತಿಲ್ಲ. ಮುಂದೊಂದು ದಿನ ಎ.ಆರ್.ರೆಹಮಾನ್‌ರಂತೆ ಪ್ರಸಿದ್ದಿಯಾಗುತ್ತಾರೆಂದು ಲಹರಿವೇಲು ಹೇಳಿದರು.

ತಾರಾಗಣದಲ್ಲಿ ಟಿ.ಎಸ್.ನಾಗಾಭರಣ, ಅವಿನಾಶ್, ಪವನ್‌ಕುಮಾರ್, ಚಂದ್ರಪ್ರಭಾ ಮುಂತಾದವರು ನಟಿಸಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್, ಸಾಹಿತ್ಯ ವಿ.ಮನೋಹರ್-ಮಧುಸೂದನ್, ನೃತ್ಯ ಅರವಿಂದ್, ಸಾಹಸ ಚಿನ್ನಯ್ಯ, ಕಲೆ ಮಂಜು ಅವರದಾಗಿದೆ. ಬೆಂಗಳೂರು, ಕೋಲಾರ, ತೇರಳ್ಳಿ ಬೆಟ್ಟ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *