Connect with us

Cinema News

ಯಕ್ಷಗಾನನಾ ಅಥವಾ ಕಂಬಳನಾ? ಕುತೂಹಲ ಹೆಚ್ಚಿಸಿದ ಕರಾವಳಿ.. ಪ್ರಜ್ವಲ್ ಹುಟ್ಟುಹಬ್ಬಕ್ಕೆ ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್

Published

on

‘ಕರಾವಳಿ’ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಮತ್ತು ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತದೆ. ಕರಾವಳಿ ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಮತ್ತೊಂದು ಭರ್ಜರಿ ಪೋಸ್ಟ್ ಅನಾವರಣವಾಗಿದೆ.

ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ಕರಾವಳಿ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ವೈರಲ್ ಆಗಿದೆ. ಇದೀಗ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಮತ್ತೊಂದು ಲುಕ್ ಗಮನ ಸೆಳೆಯುತ್ತದೆ.

ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್ ನ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.

ಬರ್ತಡೇ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ.

ಕರಾವಳಿ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ  ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *