Cinema News
ಕಮರೊಟ್ಟು ಚೆಕ್ ಪೋಸ್ಟ್‌ಗೆ 25 ರ ಸಂಭ್ರಮ

ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಯಶಸ್ವಿಯಾಗಿವೆ. ಆ ಸಾಲಿಗೆ ಹೊಸ ಸೇರ್ಪಡೆ ಕಮರೊಟ್ಟು ಚೆಕ್ ಪೋಸ್ಟ್. ಸಿನಿಮಾ ಈಗ 25 ದಿನಗಳ ಯಶಸ್ವಿ ಪ್ರದರ್ಶನದತ್ತ ಹೆಜ್ಜೆ ಹಾಕುತ್ತಿದೆ.

ಮಾಮು ಟೀ ಅಂಗಡಿ ಚಿತ್ರವನ್ನು ನಿರ್ದೇಶಿಸಿದ್ದ ಪರಮೇಶ್ ಅವರು ಸಾಕಷ್ಟು ಸಂಶೋಧನೆ ಮಾಡಿ ವಿಭಿನ್ನ ಶೈಲಿಯ ಕಥೆಯನ್ನು ಸಿದ್ಧಪಡಿಸಿ ನಿರ್ದೇಶಿಸಿದ್ದ ಕಮರೊಟ್ಟು ಚೆಕ್ ಪೋಸ್ಟ್ನಲ್ಲಿ ಪ್ಯಾರ ನಾರ್ಮಲ್ ಕಥೆ ಇತ್ತು. ಎ.ಟಿ.ರವೀಶ್ ಸಂಗೀತ ನಿರ್ದೇಶನದ 25ನೇ ಚಿತ್ರ ಈ ಕಮರೊಟ್ಟು ಚೆಕ್ ಪೋಸ್ಟ್. ಉತ್ಪಲ್, ಸ್ವಾತಿಕೊಂಡೆ, ನಿಶಾವರ್ಮ, ಅಹಲ್ಯಾ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದೊಂದು ಪ್ರೇತಾತ್ಮದ ಚಿತ್ರವಾಗಿದ್ದರೂ ಎಲ್ಲೂ ಕೂಡ ಭೂತವನ್ನು ತೋರಿಸದೆ ಕೇವಲ ಭಾವನೆಗಳಿಂದ ಪ್ರೇಕ್ಷಕರನ್ನು ಹೆದರಿಸಿದ್ದರು. ಈ ಫಾರ್ಮುಲಾ ವರ್ಕ್ ಆಗಿದ್ದು, ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಬೆಂಗಳೂರಿನ ವೈಷ್ಣವಿ ಸಫೈರ್ ಮಾಲ್‌ನಲ್ಲಿ ಸಿಲೆಬ್ರಟಿ ಶೋ ಏರ್ಪಡಿಸಿತ್ತು, ಈ ಸೆಲಬ್ರಟಿ ಶೋದಲ್ಲಿ ನೆನಪಿರಲಿ ಪ್ರೇಮ್, ಪ್ರಥಮ್ ಕವಿರಾಜ್, ಜೆಕೆ, ದಯಾಳ್, ಆಶಿಕಾ ರಂಗನಾಥ್, ಸೇರಿದಂತೆ ಸಾಕಷ್ಟು ಮಂದಿ ವೀಕ್ಷಿಸಿ ಚಿತ್ರತಂಡದ ಶ್ರಮವನ್ನು ಮೆಚ್ಚಿಕೊಂಡರು.

ಸಿನಿಮಾ ಬಿಡುಗಡೆಯಾದ ದಿನದಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಾಕಷ್ಟು ಊರುಗಳಿಂದ ಚಿತ್ರಮಂದಿರದ ಮಾಲಿಕರು ಕರೆ ಮಾಡಿ ಸಿನಿಮಾವನ್ನು ಪ್ರದರ್ಶನಕ್ಕೆ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಎಂದು ನಿರ್ದೇಶಕ ಪರಮೇಶ್ ಹೇಳಿದ್ದಾರೆ. ಈ ಸಿನಿಮಾವನ್ನು ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ.

