Cinema News
‘ಹರಿಹರ’ದಲ್ಲಿ ಗ್ಯಾಂಗಸ್ಟರ್ ಕಥೆ ಹೇಳ್ತಾರೆ ರಾಜ್ ಶೆಟ್ಟಿ

ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಸೆನ್ಸೇಶನ್ ನಿರ್ದೇಶಕ ಎಂಬ ಹೆಸರು ಗಳಿಸಿಕೊಂಡಿದ್ದ ನಟ ರಾಜ್ ಶೆಟ್ಟಿ ಮತ್ತೆ ಆ್ಯಕ್ಷನ್ ಕಟ್ ಹೇಳಲು ತಯಾರಿ ಮಾಡಿಕೊಂಡಿದ್ದು ಅದಕ್ಕೆ ‘ಹರಿಹರ’ ಎಂದು ಹೆಸರಿಟ್ಟಿದ್ದಾರೆ.
ಈ ಬಾರಿ ಅವರು ಯಾವುದೇ ಕಾಮಿಡಿ ಸಬ್ಜೆಕ್ಟ್‌ನ್ನು ಎತ್ತಿಕೊಂಡಿಲ್ಲ ಮಂಗಳೂರಿನ ಗ್ಯಾಂಗಸ್ಟರ್‌ಗಳ ಕಥೆಯನ್ನು ಹೇಳುತ್ತಾರಂತೆ.ಈ ಬಾರಿ ರಾಜ್ ಶೆಟ್ಟಿ ಜತೆ ಸ್ಯಾಂಡಲ್‌ವುಡ್ ಪ್ರತಿಭಾವಂತ ಮತ್ತು ಖ್ಯಾತ ನಟರೊಬ್ಬರು ಸಾಥ್ ನೀಡಲಿದ್ದಾರೆ. ರಾಜ್ ಶೆಟ್ಟಿ ಈ ಬಾರಿಯೂ ನಟನೆ ಜತೆಗೆ ನಿರ್ದೇಶನವನ್ನು ಮಾಡಲಿದ್ದಾರೆ.
ಮೇ ಕೊನೆಯಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು ಅದರ ತಯಾರಿಯಲ್ಲಿ ಅವರು ತೊಡಗಿಕೊಂಡಿದ್ದಾರೆ.ಒಂದು ಮೊಟ್ಟೆಯ ಕಥೆ ಸಿನಿಮಾ ಬಿಡುಗಡೆಯಾದ ಮೇಲೆ ರಾಜ್ ಶೆಟ್ಟಿ ಮಾಯಾ ಬಜಾರ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮಹಿರಾ,ಅಮ್ಮಚ್ಚಿಯೆಂಬ ನೆನೆಪು ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಈಗ ಅವರು ನಿರ್ದೇಶನಕ್ಕೆ ವಾಪಾಸ್ಸಾಗಿರುವುದಕ್ಕೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

Continue Reading