Cinema News

ಯುವರಾಜ್ ಕುಮಾರ್ ‘ಎಕ್ಕ’ ಸಿನಿಮಾದ ರೌಡಿ ರೈಮ್ಸ್ ಸಾಂಗ್ ರಿಲೀಸ್..

Published

on

ಎಕ್ಕ ಸಿನಿಮಾ ತನ್ನ ಕಂಟೆಂಟ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯಕರ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಎಕ್ಕ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಬ್ಯಾಂಗಲ್ ಬಂಗಾರಿ ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಇದೀಗ ಸಿನಿಮಾದ ಮತ್ತೊಂದು ಗೀತೆ ಬಿಡುಗಡೆಯಾಗಿದೆ.

ರೌಡಿ ರೈಮ್ಸ್ ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಅನಾವರಣಗೊಳಿಸಲಾಗಿದೆ. ಈ ಹಾಡಿನಲ್ಲಿ ರೌಡಿಗಳ ಚಿತ್ರಣವೇ ಇದೆ. ಇದರಲ್ಲಿ A to Z ವಿಷಯ ಇದೆ. ಅಂದ್ರೆ A ಅಕ್ಷರದಿಂದ Z ಅಕ್ಷರದ ವರೆಗೂ ರೌಡಿಗಳ ಮ್ಯಾಟರ್ ಅನ್ನ ಇಲ್ಲಿ ಮಜವಾಗಿಯೇ ಹೇಳಲಾಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಇಲ್ಲೂ ಟ್ರೆಂಡಿ ಟ್ಯೂನ್ ಕೊಟ್ಟಿದ್ದಾರೆ.

 

 

 

ರೌಡಿ ರೈಮ್ಸ್ ಹಾಡಿಗೆ ನಾಗಾರ್ಜುನ್ ಶರ್ಮಾ ಹಾಗೂ ನಿರ್ದೇಶಕ ರೋಹಿತ್ ಪದಕಿ ಸಾಹಿತ್ಯ ಬರೆದಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ರೋಹಿತ್ ಪದಕಿ ರೌಡಿ ರೈಮ್ಸ್ ಗೆ ಧ್ವನಿಯಾಗಿದ್ದಾರೆ.

ಎಕ್ಕ’ ಚಿತ್ರಕ್ಕೆ ರೋಹಿತ್ ಪದಕಿ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಈ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡಾ ಅಭಿನಯಿಸಿದ್ದಾರೆ. ಇವರಲ್ಲದೇ ಈ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ 18ರಂದು ಎಕ್ಕ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

Spread the love
Click to comment

Copyright © 2019 PopcornKannada.com