Cinema News

ರಗಡ್ ಲುಕ್ ನಲ್ಲಿ ಮರಿ ಯಂಗ್ ಟೈಗರ್: ಮಾದೇವನಾದ ವಿನೋದ್ ಪ್ರಭಾಕರ್

Published

on

ಮರಿ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಮಾದೇವ ಹೆಸರಿನ ಮಾಸ್ ಸಿನಿಮಾದಲ್ಲಿ ಯಂಗ್ ಟೈಗರ್ ಅಬ್ಬರಿಸಲಿದ್ದು ಇಂದು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ನವೀನ್ ರೆಡ್ಡಿ ನಿರ್ದೇಶನದ ಮಾದೇವ ಸಿನಿಮಾವನ್ನ ಗಾಯತ್ರಿ ಆರ್ ಹಳಲೆ ನಿರ್ಮಾಣ ಮಾಡುತ್ತಿದ್ದಾರೆ. ಮಾಸ್ ಸಿನಿಮಾಗಳಿಗೆ ವಿನೋದ್ ಪ್ರಭಾಕರ್ ಹೇಳಿ ಮಾಡಿಸಿದ ನಟನಾಗಿದ್ದು, ಅವರಿಗಾಗಿಯೇ ಈ ರೀತಿಯ ಕಥೆಯನ್ನು ಬರೆದಿದ್ದಾರಂತೆ ನಿರ್ದೇಶಕ ನವೀನ್ ರೆಡ್ಡಿ.
ಮಾದೇವ ಶಿವನ ಮತ್ತೊಂದು ಹೆಸರಾಗಿದ್ದು ಇದೇ ಕಾರಣಕ್ಕೆ ಉಗ್ರ ಸ್ವರೂಪಿಯ ಹೆಸರಿನಲ್ಲಿ ಈ ಸಿನಿಮಾ ತಯಾರಾಗಲಿದೆಯಂತೆ. ಈಗಾಗ್ಲೆ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ವಿನೋದ್ ಪ್ರಭಾಕರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಸದ್ಯದಲ್ಲೇ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.

Spread the love

Copyright © 2019 PopcornKannada.com