Cinema News

‘ಪರಿಮಳ ಲಾಡ್ಜ್‌’ನಲ್ಲಿ ಸತೀಶ್‌,ಯೋಗಿ

Published

on

ನೀರ್‌ ದೋಸೆ ಸಿನಿಮಾದ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ವಿಜಯ್‌ ಪ್ರಸಾದ್‌ ಇಗ ಪರಿಮಳ ಲಾಡ್ಜ್‌ ಎಂಬ ಹೊಸ ಸಿನಿಮಾ ಆರಂಭಿಸಿದ್ದು, ಅದರಲ್ಲಿ ನೀನಾಸಂ ಸತೀಶ್‌ ಮತ್ತು ಲೂಸ್‌ ಮಾದ ಯೋಗಿ ನಾಯಕರಾಗಿದ್ದಾರೆ. ನೀರ್ದೋಸೆ, ಬ್ಯೂಟಿಫುಲ್ ಮನಸುಗಳು ಚಿತ್ರಗಳ ನಿರ್ಮಾಪಕರಾದ ಪ್ರಸನ್ನ ವೇರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

 

 

ಬುಧವಾರ ಸೆಟ್ಟೇರಿರುವ ಈ ಚಿತ್ರದಲ್ಲಿ ಸುಮನ್‌ ರಂಗನಾಥ್‌, ದತ್ತಣ್ಣ, ಬುಲೆಟ್‌ ಪ್ರಕಾಶ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಟೀಸರ್‌ನಲ್ಲಿರುವ ಡೈಲಾಗ್‌ ಮತ್ತು ಟೈಟಲ್‌ ಕಾರ್ಡ್‌ನಲ್ಲಿ ಬಳಿಸಿರುವ ಪದಗಳು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಒಂದಷ್ಟು ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ಪ್ರಚಾರಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು ಎಂದು ಬರೆದಿದ್ದಾರೆ.

 

 

ಇದನ್ನು ಗಮನಿಸಿದ ನಟ ಸತೀಶ್‌ ಇದು ತಮಾಷೆಗಾಗಿ ಮಾಡಿದ್ದು, ಸಿನಿಮಾದಲ್ಲಿ ಉತ್ತಮ ಕಂಟೆಂಟ್‌ ಇದೆ. ಇದೊಂದು ಸೆನ್ಸಿಬಲ್‌ ಸಿನಿಮಾ ಎಂದು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ಇನ್ನು ಪರಿಮಳ ಲಾಡ್ಜ್‌ ಒಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ ಅಂತಲೂ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಬರೀ ಟೀಸರ್‌ನಿಂದಲೇ ಪರಿಮಳಾ ಲಾಡ್ಜ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

 

ಚಿತ್ರದ ಟೀಸರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ವಿಶೇಷ.

 

 

 

Spread the love
Click to comment

Copyright © 2019 PopcornKannada.com