Cinema News
ತಾಜ್ ವೆಸ್ಟ್ ಎಂಡ್‌ನಲ್ಲಿ ಯಶ್-ರಾಧಿಕಾ ಮಗಳ ನಾಮಕರಣ
ನಾಳೆ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ನಾಮಕರಣ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಯಶ್ ಮತ್ತು ರಾಧಿಕಾ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಈ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಅಕೌಂಟ್‌ನಲ್ಲಿ ಯಶ್ ಮಗುವಿನ ಫೋಟೋವನ್ನು ಹಾಕಿ, ‘ಹಾಯ್ ನನಗೆ ಹೆಸರಿಡುವ ಸಮಯ ಬಂದಿದೆ. ನೀವೆಲ್ಲರೂ ನನಗೆ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದೀರ ಅದರಲ್ಲಿ ತುಂಬಾ ಮುದ್ದಾದ ಹೆಸರನ್ನು ನಮ್ಮ ತಂದೆ ತಾಯಿ ನನಗೆಇಡುತ್ತಿದ್ದಾರೆ. ಅದು ಇದೇ ಭಾನುವಾರ’ಎಂದು ಬರೆದಿದ್ದಾರೆ.
‘ಪಾಪ್ ಕಾರ್ನ್ ಕನ್ನಡ’ಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಭಾನುವಾರ ತಾಜ್ ವೆಸ್ಟ್ ಎಂಡ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತದೆ. ಈ ಮಗುವಿನ ಹೆಸರಿನ ಬಗ್ಗೆ ಭಾರಿ ಚರ್ಚೆಗಳು ನಡೆದಿತ್ತು. ಫೈನಲಿ ಯಶ್ ಮತ್ತು ರಾಧಿಕಾ ಇಬ್ಬರೂ ಮಗುವಿಗೆ ಹೆಸರನ್ನು ಇಡಲು ನಿರ್ಧಾರ ಮಾಡಿದ್ದಾರೆ.