Box Office

ಕೆಜಿಎಫ್‌ ದಾಖಲೆ ಮುರಿಯತ್ತಾ ಕುರುಕ್ಷೇತ್ರ?

Published

on

ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಕೆಜಿಎಫ್‌ನ ದಾಖಲೆಯನ್ನು ಮುರಿಯುವತ್ತ  ಚಾಲೆಂಜಿಂಗ್ ಸ್ಟಾರ್ ದರ್ಶನ್‌ ನಟನೆಯ ಕುರುಕ್ಷೇತ್ರ ಹೆಜ್ಜೆ ಹಾಕುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರವಾಹದಿಂದ ಚಿತ್ರಕ್ಕೆ ಸ್ವಲ್ಪ ಮಟ್ಟಿಗೆ ಏಟು ಕೊಟ್ಟಿರೋದು ನಿಜ. ಮಳೆ ಇಲ್ಲದ್ದಿದಲ್ಲಿ ಕೆಜಿಎಫ್ ದಾಖಲೆ ಮುರಿಯುತ್ತಿತ್ತು ಎಂಬ ಮಾತುಗಳು  ಕೇಳಿಬರುತ್ತಿವೆ.

ಹೌದು, ಕಳೆದ ವಾರ ಬಿಡುಗಡೆಯಾಗಿ ಎಲ್ಲ ಕಡೆಯೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಈಗ ಮೂವತ್ತು ಕೊಟಿ ಕಲೆಕ್ಷನ್‌ ಕಂಡಿದೆ ಎನ್ನಲಾಗುತ್ತಿದೆ.

 

 

ಬಿಡುಗೆಯಾದ 300 ಕೇಂದ್ರಗಳಲ್ಲಿಯೂ ಸಿನಿಮಾ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ರಿಪೀಟ್‌ ಆಡಿಯನ್ಸ್‌ ಹೆಚ್ಚಾಗುತ್ತಿದ್ದಾರೆ. ಇನ್ನು ಈ ಸಿನಿಮಾ ವಿತರಕರೇ ಮಾಹಿತಿ ನೀಡುವಂತೆ ಮೊದಲ ದಿನ 13 ಕೊಟಿ ರೂಪಾಯಿ ಗಳಿಸಿತ್ತು. ಆದಾದ ಮೇಲೆ ಎರಡನೇ ದಿನ ಮತ್ತು ಮೂರನೇ ದಿನಕ್ಕೆ ಸಿನಿಮಾ ಕಲೆಕ್ಷನ್‌ 20 ಕೋಟಿ ದಾಟಿತ್ತು. ಮೊದಲ ವಾರ ಸುಮಾರು 30ಕೋಟಿಗೂ ಅಧಿಕ ಗಳಿಸಿದೆ ಎನ್ನಲಾಗುತ್ತಿದ್ದು,ಇದೆಲ್ಲವನ್ನು ನೋಡಿ ಜತೆಗೆ, ಈಗ ಕಾಣುತ್ತಿರುವಂತೆ ಮುಂದೆಯೂ  ಇದೆ ರೀತಿ ತುಂಬಿದ ಗೃಹಗಳ ಪ್ರದರ್ಶನ ಕಂಡರೆ ಸಿನಿಮಾ ಆದಷ್ಟು ಬೇಗ ಕೆಜಿಎಫ್‌ ದಾಖಲೆಯನ್ನು ಮುರಿಯಬಹುದು ಎನ್ನುತ್ತಾರೆ ಬಾಕ್ಸ್‌ ಆಫೀಸ್‌ ಪಂಡಿತರು.

 

 

ಇನ್ನು ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಯಾವ ಭಾಷೆಯಲ್ಲಿಯೂ ಸ್ಟಾರ್‌ಗಳ ಸಿನಿಮಾ ಇಲ್ಲದೇ ಇರುವುದು ಕುರುಕ್ಷೇತ್ರಕ್ಕೆ ನೆರವಾಗಿದೆ. ಹಾಗಾಗಿ ಇದು ಆದಷ್ಟು ಬೇಗ ನೂರು ಕೋಟಿ ಕ್ಲಬ್‌ ಸೇರುತ್ತದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

 

ಅರ್ಜುನ್‌ ಸರ್ಜಾ, ಸ್ನೇಹಾ, ನಿಖಿಲ್‌ಕುಮಾರ್‌, ಮೇಘನಾ ರಾಜ್‌, ಅಂಬರೀಷ್‌ ಸೇರಿದಂತೆ ಬಹು ತಾರಾಗಣ ಸಿನಿಮಾದಲ್ಲಿದೆ.

Spread the love
Click to comment

Copyright © 2019 PopcornKannada.com