Cinema News

ಏನೋ ಗೊತ್ತಿಲ್ಲ ಅಂತ “ಲವ್ ಮ್ಯಾಟ್ರು” ಹೇಳ್ತಿದ್ದಾರೆ ವಿರಾಟ ಬಿಲ್ವ

Published

on

ಲವ್ ಸಬ್ಜೆಕ್ಟ್ ಇರುವಮನತಹ ಸಿನಿಮಾಗಳು ಎಲ್ಲರಿಗೂ ಇಷ್ಟವಾಗುತ್ತವೆ. ಯಾಕಂದ್ರೆ ಅಲ್ಲೊಂದು ಮಧುರ ಪ್ರೇಮವಿರುತ್ತದೆ, ಸುಂದರ ಪ್ರೆಮಗೀತೆಯಿರುತ್ತದೆ. ಹೀಗಾಗಿ ಎಲ್ಲಾ ವರ್ಗದವರಿಗೂ ಈ ರೀತಿಯ ಸಿನಿಮಾಗಳು ಇಷ್ಟವಾಗುತ್ತವೆ. ಇಷ್ಟೆಲ್ಲ ಹೇಳೋದಕ್ಕೆ ಕಾರಣ ಲವ್ ಮ್ಯಾಟ್ರು ಸಿನಿಮಾ. ಸದ್ಯ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಿನಿ ಪ್ರೇಮಿಗಳ ಮುಂದೆ ಬರೋದಕ್ಕೆ ರೆಡಿಯಾಗಿದೆ.

 

 

 

ಹೆಸರು ಕೇಳಿದರೇನೆ ಇದೊಂದು ಲವ್ ಕಂಟೆಂಟ್ ಇರುವ ಸಿನಿಮಾ ಅನ್ನಿಸೋದರಲ್ಲಿ ಅನುಮಾನವಿಲ್ಲ. ಲವ್ ಮ್ಯಾಟ್ರು ಸಿನಿಮಾದಲ್ಲಿ ಬೇಜಾನ್ ಲವ್ ಮ್ಯಾಟ್ರು ಇದೆ ಅನ್ನೋದನ್ನ ಊಹೆ ಮಾಡಬಹುದು. ಈಗ ಹಾಡುಗಳನ್ನ ರಿಲೀಸ್ ಮಾಡಿದ್ದು, ಕೇಳುಗರಿಗೆ ಖುಷಿ ಕೊಡುತ್ತಿದೆ. ಅದರಲ್ಲೂ ಲವ್ ಮಾಡೋರಿಗೆ ಮನಸ್ಸು ತೇಲುವಂತೆ ಮಾಡ್ತಿದೆ. ಏನೋ ಗೊತ್ತಿಲ್ಲ ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡಿಗೆ ನಟ ವಿರಾಟ ಬಿಲ್ವ ಹಾಗೂ ಸೋನಲ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಸೊನಲ್ ಅಂತು ತುಂಬಾ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.

 

 

 

ಇನ್ನು ಈ ಸಿನಿಮಾಗೆ ವಿರಾಟ ಬಿಲ್ವ ಅವರೇ ನಿರ್ದೇಶನ ಮಾಡಿದ್ದಾರೆ. ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ ಎಂ ಚೈತನ್ಯ ಅವರ ಸಿನಿಮಾಗಳೇ ಇವರಿಗೆ ಸ್ಪೂರ್ತಿ. ಈ ಮೂವರೇ ವಿರಾಟ ಗುರುಗಳು. ಕಡ್ಡಿಪುಡಿಯಲ್ಲೂ ನಟನೆ ಮಾಡಿದ್ದು, ಬಳಿಕ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದಾರೆ.

 

 

 

ವಂದನ ಪ್ರಿಯ ವಿ ರವರ ಸಿಲ್ವರಿಥಮ್ PRODUCTION ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ ಲವ್ ಮ್ಯಾಟ್ರೂ, ಎಲ್ಲರ ಶ್ರಮದಿಂದ ರಿಲೀಸ್ ಗೆ ರೆಡಿಯಾಗಿದೆ. ಸೋನಲ್, ಸುಶ್ಮಿತಾ ಗೋಪಿನಾಥ್, ಅಚ್ಯುತ್ಕುಮಾರ್, ಸುಮನ್ ರಣಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ‌. ಶೇಡ್ರಾಕ್ ಸೋಲೋಮನ್ – ಸಂಗೀತ, ದೇವೇಂದ್ರ ಆರ್ ನಾಯ್ಡು ಮತ್ತು ಪರಮೇಶ್ ಸಿ ಎಂ – ಛಾಯಾಗ್ರಹಣ, ಸುರೇಶ್ ಅರಸ್ – ಸಂಕಲನವಿದೆ. ಎಲ್ಲಾ ಅಂದುಕೊಂಡಂತೆ ರೆಡಿಯಾಗಿದ್ದು, ತೆರೆಮೇಲೆ ಶೀಘ್ರದಲ್ಲಿಯೇ ಬರಲಿದೆ.

 

Spread the love
Click to comment

Copyright © 2019 PopcornKannada.com