Cinema News
ರವಿಚಂದ್ರನ್ ಪುತ್ರನಿಗಾಗಿ ಹಿರೋಯಿನ್ ಶೋಧ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅವರ ಲಾಂಚ್‌ಗೆ ಎಲ್ಲ ರೀತಿಯ ಸಿದ್ಧತೆ ನಡೆದಿದ್ದು, ಈಗ ಆ ಸಿನಿಮಾಗೆ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಈ ಚಿತ್ರವನ್ನು ಮಾಸ್ ಲೀಡರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಹನಾ ಮೂರ್ತಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ ಪ್ರೆಸ್ ನೋಟ್ ರಿಲೀಸ್ ಮಾಡಿರುವ ಚಿತ್ರತಂಡ ಪ್ರತಿಭಾವಂತ ನಟಿಯ ಹುಡುಕಾಟವನ್ನು ಚಿತ್ರತಂಡ ನಡೆಸುತ್ತಿದೆ. ವಿಶೇಷ ಎಂದರೆ ಈ ಚಿತ್ರ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ.
ಈಗಾಗಲೇ ವಿಕ್ರಮ್ ಫೋಟೋ ಶೂಟ್ ಮಾಡಿಸಿದ್ದು, ಮಾಸ್ ಮತ್ತು ಚಾಕ್ಲೆಟ್ ಹೀರೋ ಲುಕ್‌ನಲ್ಲಿ ಮಿಂಚಿದ್ದಾರೆ. ರವಿಚಂದ್ರನ್ ಅವರ ಹಿರಿಯ ಪುತ್ರ ಈಗಾಗಲೇ ಸ್ಯಾಂಡಲ್‌ವುಡ್ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.