News
ವಿಜಯ್ ಸೂರ್ಯರ ‘ಪ್ರೇಮಲೋಕ’ ಆರಂಭ
ಅಗ್ನಿ ಸಾಕ್ಷಿ ಮೂಲಕ ಸಾವಿರಾರು ಅಭಿಮಾನಿಗಳನ್ನು ಗಳಸಿಕೊಂಡ ವಿಜಯ್ ಸೂರ್ಯ ಈಗ ಕಿರುತೆರೆಯಲ್ಲಿ ಪ್ರೇಮ ಲೋಕ ಎಂಬ ಸೀರಿಯಲ್ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಅದು ಸೋಮವಾರದಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
‘ಅವನೊಬ್ಬ ಶ್ರೀಮಂತ ಮನೆತನದ ಗುಳಿ ಕೆನ್ನೆ ಚೆಲುವ ಅವಳು ಮಧ್ಯ್ಯಮವರ್ಗದ ಮುಗ್ಧ ಮನಸ್ಸಿನ ಹುಡುಗಿ ಇವರಿಬ್ಬರ ಸುತ್ತ ಅವರಿಗೆ ಗೊತ್ತಿಲ್ಲದ ಹಾಗೆಒಂದು ಪ್ರೇಮ ಲೋಕ ಸೃಷ್ಟಿಯಾಗಿರುತ್ತದೆ ಅದೇ ಈ ಪ್ರೇಮ ಲೋಕ ಸೀರಿಯಲ್‌ನ ಕಥೆಯಾಗಿದೆ. ಈಗಾಗಲೇ ತನ್ನ ಪ್ರೋಮೋ ಮೂಲಕ ಪ್ರೇಮ ಲೋಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ವಿಜಯ್ ಸೂರ್ಯ ಅಗ್ನಿ ಸಾಕ್ಷಿಯಿಂದ ಹೊರ ಬಂದದ್ದಕ್ಕೆ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಅಂತಹ ಅಭಿಮಾನಿಗಳಿಗೆ ವಿಜಯ್ ಸೂರ್ಯ ಆದಷ್ಟ ಬೇಗ ಕಿರುತೆರೆಗೆ ವಾಪಾಸ್ಸಾಗಿರುವುದಕ್ಕೆ ಅವರೆಲ್ಲರೂ ಖುಷಿಯಾಗಿದ್ದಾರೆ.
ಇನ್ನು ಈ ಸೀರಿಯಲ್‌ನಲ್ಲಿ ವಿಜಯ್ ಸೂರ್ಯಗೆ ಹೊಸ ಪ್ರತಿಭೆ ನವ್ಯ ಗೌಡ ಜೋಡಿಯಾಗಿದ್ದಾರೆ. ಅಗ್ನಿ ಸಾಕ್ಷಿಯನ್ನು ನಿರ್ದೇಶನ ಮಾಡುತ್ತಿದ್ದ ಮೈಸೂರು ಮಂಜು ಅವರೇ ಈ ಪ್ರೇಮಲೋಕ ಸೀರಿಯಲ್‌ನ್ನು ನಿರ್ದೇಶನ ಮಾಡುತ್ತಿರುವುದು ಈ ಸೀರಿಯಲ್ನ ಮತ್ತೊಂದು ವಿಶೇಷತೆಯಾಗಿದೆ.
ಸೋಮವಾರದಿಂದ ಶನಿವಾರದವರೆಗೆ ಈ ಸೀರಿಯಲ್ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.