Cinema News
‘ಆನಂದ್’ಗಾಗಿ ಅಂಡರ್ ವಾಟರ್ ಫೈಟ್ ಮಾಡಿದ ಶಿವಣ್ಣ
ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ ‘ಆನಂದ್’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದರಲ್ಲಿ ಬರುವ ಒಂದು ದೃಶ್ಯಕ್ಕಾಗಿ ಅಂಡರ್ ವಾಟರ್ ಫೈಟಿಂಗ್ ಸೀನ್‌ನ್ನು ಚಿತ್ರತಂಡ ಇತ್ತೀಚೆಗೆ ಶೂಟ್ ಮಾಡಿದೆ.
ಶಿವಲಿಂಗ ಚಿತ್ರದ ಮೂಲಕ ಹಿಟ್ ಜೋಡಿ ಎನಿಸಿಕೊಂಡಿದ್ದ ಪಿ ವಾಸು ಮತ್ತು ಶಿವಣ್ಣ ಆನಂದ್ ಮೂಲಕ ಮತ್ತೊಮ್ಮೆ ಜತೆಯಾಗಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮೂಲಗಳ ಪ್ರಕಾರ ಈ ಚಿತ್ರ ಸೈಕಾಲಾಜಿಕಲ್ ಥ್ರಿಲ್ಲರ್ ಎನ್ನಲಾಗುತ್ತಿದೆ. ಈ ಸಿನಿಮಾಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಹರಿದಾಡುತ್ತಿದೆ.
ನೀರಿನಲ್ಲಿ ಶಿವರಾಜ್‌ಕುಮಾರ್ ಸುತ್ತ ಲಾಂಗ್ ಹಿಡಿದು ಕೆಲ ಕಲಾವಿದರು ನಿಂತಿದ್ದಾರೆ. ಈ ಫೋಟೋದಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸಹ ಇದ್ದಾರೆ. ಹಾಗಾಗಿ ಆನಂದ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅಂಡರ್ ವಾಟರ್ ಫೈಟ್ ಮಾಡಿರಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಈ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ದ್ವಾರಕೀಶ್ ಚಿತ್ರ ಸಂಸ್ಥೆ ‘ಆನಂದ್’ಗೆ ಬಂಡವಾಳ ಹೂಡುತ್ತಿದ್ದಾರೆ.