Cinema News

ತೋತಾಪುರಿ-2 ಈವಾರ ತೆರೆಗೆ

Published

on

ಗೋವಿಂದಾಯನಮಃ, ಶಿವಲಿಂಗದಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ ಕೆ.ಸುರೇಶ್ ಅವರ ನಿರ್ಮಾಣದ ‘ತೋತಾಪುರಿ -2’ ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.


ಕಳೆದವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಿತ್ರದ ಸೀಕ್ವೇನ್ಸ್ ಇದಾಗಿದ್ದು, ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸುರೇಶ್ ಆರ್ಟ್ಸ್, ಮೋನ್ ಫ್ಲಿಕ್ಸ್ ಸ್ಟುಡಿಯೋಸ್ ಲಾಂಚನದಲ್ಲಿ ಕೆ.ಎ. ಸುರೇಶ್ ಅವರು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಉತ್ತಮ ಮನರಂಜನೆಯ ಜೊತೆ ಸದಭಿರುಚಿಯ ಹಾಸ್ಯ ತೋತಾಪುರಿ-2 ಚಿತ್ರದ ಹೈಲೈಟ್.

ನಟ ರಾಕ್ಷಸ ಡಾಲಿ ಧನಂಜಯ್ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ನಿರಂಜನ ಬಾಬು ಅವರ ಛಸಯಾಗ್ರಹಣ, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ.

Spread the love
Click to comment

Copyright © 2019 PopcornKannada.com