Cinema News

‘ಟ್ರೇಲರ್ ಡಿಕೋಡ್’ ಸ್ಪರ್ಧೆ ಮೂಲಕ ಕೂತೂಹಲ ಹುಟ್ಟಿಸಿದ್ದ ‘ಮಾತೊಂದ ಹೇಳುವೆ’ ಚಿತ್ರದ ಟ್ರೇಲರ್ ಬಿಡುಗಡೆ .

Published

on

ವಿಭಿನ್ನ ರೀತಿಯ ಪ್ರಚಾರ ತಂತ್ರಗಳ ಮೂಲಕ ಗಮನ ಸೆಳೆದಿರೋ ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಟ್ರೇಲರ್ ಬಿಡುಗಡೆಗೂ ಪೂರ್ವಭಾವಿಯಾಗಿ ಚಿತ್ರತಂಡ ‘ ಟ್ರೇಲರ್ ಡಿಕೋಡ್ ‘ ಸ್ಪರ್ಧೆ ಹೊರಬಿಟ್ಟಿತ್ತು. ಚಿತ್ರದ ನಾಯಕ ಮತ್ತು ನಾಯಕಿಯ ಡೈಲಾಗ್ ಮ್ಯೂಟ್ ಮಾಡಿ, ಜನರಿಗೆ ಡೈಲಾಗ್ ಊಹಿಸಲು ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರಿ ಉತ್ತರ ನೀಡಿದ ಮೊದಲ 5 ಜನರಿಗೆ ತಲಾ 5,000 ನಗದು ಬಹುಮಾನ ಎಂದು ಘೋಷಿಸಲಾಗಿತ್ತು. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ವಿಜೇತರಿಗೆ ಬಹುಮಾನ ಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಹುಬ್ಬಳ್ಳಿ – ಧಾರವಾಡ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಮಯೂರ್ ಕಡಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಕೆಲವು ಕಂಟೆಂಟ್ ಗಳ ಮೂಲಕ ಪ್ರೇಕ್ಷಕರ ಮನ ತಲುಪಿರುವ ‘ಮಾತೊಂದ ಹೇಳುವೆ’ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Spread the love

Copyright © 2019 PopcornKannada.com