Cinema News

ಸಿನಿಮಾದ ಟೈಟಲ್ ಆಯ್ತು ಪುನೀತ್ ರಾಜ್ ಕುಮಾರ್ ನಟನೆಯ ಈ ಚಿತ್ರದ ಹಾಡು

Published

on

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ವಂಶಿ ಸಿನಿಮಾದ ಭುವನಂ ಗಗನಂ ಹಾಡು ಸಖತ್ ಹಿಟ್ ಆಗಿತ್ತು. ಇಂದಿಗೂ ಕನ್ನಡದ ಬೆಸ್ಟ್ ಹಾಡುಗಳಲ್ಲಿ ವಂಶಿ ಸಿನಿಮಾದ ಭುವನಂ ಗಗನಂ ಸಿನಿಮಾವೂ ಒಂದು. ಈ ಹಾಡಿನ ಸಾಲು ಇದೀಗ ಸಿನಿಮಾವಾಗುತ್ತಿದೆ. ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಪ್ರಮೋದ್ ನಟನೆಯ ಹೊಸ ಸಿನಿಮಾಗೆ ಭುವನಂ ಗಗನಂ ಎಂದು ಹೆಸರಿಡಲಾಗಿದೆ. ಎಸ್ ವಿ ಸಿ ಫಿಲ್ಮಂಸ್ ಪ್ರೊಡಕ್ಷನ್ ಹೌಸ್ ನಲ್ಲಿ ಎಂ ಮುನೇಗೌಡ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ರಾಜರು ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ.
ಭುವನಂ ಗಗನಂ ಸಿನಿಮಾ ಲವ್, ರೊಮ್ಯಾನ್ಸ್ ಹಾಗೂ ಕೌಟುಂಬಿಕ ಕಥಾ ಹಂದರದ ಸಿನಿಮಾವಾಗಿದ್ದು ನಗರ ಹಾಗೂ ಹಳ್ಳಿ ಎರಡೂ ಬ್ಯಾಕ್ ಡ್ರಾಪ್ ನಲ್ಲಿ ನಡೆಯಲಿದೆ. ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಹಾಗೂ ಪೃಥ್ವಿಗೆ ನಾಯಕಿಯಾಗಿ ವಾಮನ ಸಿನಿಮಾದ ನಟಿ ರಚನಾ ರೈ ಕಾಣಿಸಿಕೊಳ್ತಿದ್ದಾರೆ.
ಜುಲೈ 1ರಿಂದ ಸಿನಿಮಾ ಆರಂಭವಾಗಲಿದ್ದು ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

Spread the love
Click to comment

Copyright © 2019 PopcornKannada.com