Cinema News

ಟೀಸರ್ ನಲ್ಲೇ ಕುತೂಹಲ ಮೂಡಿಸಿರುವ “ಬಾಸ್” ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ.

Published

on

ಟೀಸರ್‌ನಲ್ಲೇ ಕುತೂಹಲ ಕೆರಳಿಸಿರುವ “ಬಾಸ್” ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿ. ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಈ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಸಿರಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ರಚಿಸಿರುವ “ಏನಿದೆಯೋ ನಿನ್ನ ಮಾಯೆ” ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಗೊಂಡಿದೆ. ಹಾಡು ಬಿಡುಗಡೆಯಾದ ಬಳಿಕ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.

ಕ್ರೈಮ್ ಥ್ರಿಲ್ಲರ್ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ಮೊದಲ ಹಾಡಿಗೆ ಡೆವಿ ಸುರೇಶ್ ಸಂಗೀತ ಸಂಯೋಜಿಸಿದ್ದು, ನವೀನ್ ಸಜ್ಜು ಧ್ವನಿ ನೀಡಿದ್ದಾರೆ. ಬಿಡುಗಡೆಯಾದ ತಕ್ಷಣವೇ ಹಾಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತಿದೆ. ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ ಎಂದು ನಿರ್ದೇಶಕ ವಿ. ಲವ ತಿಳಿಸಿದರು.

ನಾಯಕ ತನುಷ್ ಶಿವಣ್ಣ ಆರಂಭದಿಂದಲೇ ಬೆಂಬಲ ನೀಡಿದ ಎಲ್ಲರಿಗೂ ಹಾಗೂ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಾಯಕಿ ಪಾಯಲ್ ಚಂಗಪ್ಪ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

“ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಅನುಭವಿಸುವ ನೋವು ಮತ್ತು ಸಂಕಟಗಳನ್ನು ಈ ಹಾಡಿನಲ್ಲಿ ವ್ಯಕ್ತಪಡಿಸಿದ್ದೇನೆ,” ಎಂದು ಗೀತರಚನೆಕಾರ ಪ್ರಮೋದ್ ಮರವಂತೆ ಹೇಳಿದರು.

ಚಿತ್ರದಲ್ಲಿ ವೀರೇನ್ ಕೇಶವ್, ಭೀಷ್ಮ ರಾಮಯ್ಯ, ಲಕ್ಷ್ಮಣ್ ಪೂಜಾರಿ, ಡಾ|| ಪ್ರಮೋದ್ ಹಿರೇಮಠ, ಅಕ್ಷಯ್ ಸೇರಿದಂತೆ ಹಲವರು ಅಭಿನಯಿಸಿದ್ದು, ಛಾಯಾಗ್ರಾಹಕ ಶರತ್ ಎನ್.ಆರ್.ಪುರ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Spread the love
Click to comment

Copyright © 2019 PopcornKannada.com