Cinema News

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಯ್ತು ಬರ್ತಿದೆ ದಿ ಕಾಶ್ಮೀರ್ ಸಾಂಗ್…ಇದೇ ಶನಿವಾರ ಹಾಡು ಅನಾವರಣ

Published

on

ನಮ್ಮ ದೇಶದ ಮುಕುಟ ಪ್ರಾಯವಾಗಿರುವ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಿದ್ದ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ,
ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು‌ ಬಿಚ್ಚಿಟ್ಟಿದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದವರ ಮುಂದೆ ಬಂದಿತ್ತು.

ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಕೋವಿದ್ ಮಿತ್ತಲ್, ಪ್ರತಿಯೊಬ್ಬರಿಗೂ ಈ ಹಾಡು ಇಷ್ಟವಾಗುತ್ತದೆ. ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಸಲ್ಲಿಸುವ ಹಾಡು ಎಂದರು.

ನಿರ್ದೇಶಕ ಕ್ರಿಷ್ ಜೋಷಿ, ಶೇಖರ್ ಅಸ್ತಿತ್ವ ಎರಡು ದಿನದಲ್ಲಿ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಸಾಂಗ್ ಕೈಗೆ ಸಿಕ್ಕಮೇಲೆ ಜೋಶ್ ಹೆಚ್ಚಾಯ್ತು. ಮನಾಲಿಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದ್ರೆ ಆಗಲಿಲ್ಲ. ಕಂಪ್ಲೀಟ್ ಎಮೋಷನ್ ಕಥೆ ಬಿಲ್ಡ್ ಮಾಡುವುದು ಕಷ್ಟವಾಯ್ತು. ಲೇಟ್ ಆಗಿ ಕಾಸ್ಟ್ಯೂಮ್ ಸಿಕ್ತು. ಫೈನಲಿ ಎಲ್ಲಾ ಕಷ್ಟ ಇಷ್ಟದೊಂದಿಗೆ ಸಾಂಗ್ ಕಂಪ್ಲೀಟ್ ಆಗಿದೆ ಎಂದರು.

 

 

 

 

ಶೇಖರ್ ಅಸ್ತಿತ್ವ ಸಾಹಿತ್ಯದ ದಿ ಕಾಶ್ಮೀರ್ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಕೆ ರಾಜು ಸಂಕಲನ ಹಾಡಿಗಿದ್ದು, ಕೆಎಂ ಮೀಡಿಯಾ ಮತ್ತು ಪ್ರೊಡಕ್ಷನ್ ನಡಿ ನಿರ್ಮಾಣ ನಿರ್ವಹಣೆ ಸಾಗರ್ ಬರರ್ದಾಪುರೆ ಹೊತ್ತುಕೊಂಡಿದ್ದಾರೆ.

ಆದಿತ್ಯ 25 ವರ್ಷದ ನಂತರ ತನ್ನ ತಾಯ್ನಡು ಕಾಶ್ಮೀರಕ್ಕೆ ಬಂದಾಗ ಹಳೆ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವ ಕಾಶ್ಮೀರದ ಕರಾಳತೆಯನ್ನು ವಿವರಿಸುವ ಹಾಡಿನಲ್ಲಿ ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ನಟಿಸಿದ್ದು, ಈ ಅಲ್ಬಮ್ ಸಾಂಗ್ Get High on Music” ಎಂಬ ಮ್ಯೂಸಿಕ್ ರೆಕಾರ್ಡ್ ಅಲ್ಬಮ್ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಇದೇ ಶನಿವಾರ ಬಿಡುಗಡೆ ಆಗಲಿದೆ.

Spread the love
Click to comment

Copyright © 2019 PopcornKannada.com