Cinema News

ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನರಮನ ತಲುಪಿರುವ “ದೂರ ತೀರ ಯಾನ” ಚಿತ್ರ ಈ ವಾರ ಬಿಡುಗಡೆ ..

Published

on

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸಿರುವ ಹಾಗೂ ಮಂಸೋರೆ ನಿರ್ದೇಶನದ `ದೂರ ತೀರ ಯಾನ’ ಸಿನೆಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಸುಮಧುರವಾಗಿದೆ. ಟ್ರೇಲರ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಬಹು ನಿರೀಕ್ಷಿತ ಈ ಚಿತ್ರ ಈ ವಾರ ಜುಲೈ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಧಾರಾವಾಡದ ಪದ್ಮ ಚಿತ್ರಮಂದಿರದಲ್ಲಿ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ.

 

 

 

ಈ ಕುರಿತು ಮಾತನಾಡುವ ನಿರ್ದೇಶಕ ಮಂಸೋರೆ ಅವರು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಪ್ರೀಮಿಯರ್‌ ಶೋಗಳನ್ನು ಆಯೋಜಿಸುವುದು ವಾಡಿಕೆ. ಆದರೆ ನಾವು ಉತ್ತರ ಕರ್ನಾಟಕದ ಹೃದಯಭಾಗವಾದ‌,‌ ಅನೇಕ ಸಾಹಿತಿಗಳ ತವರಾದ ಧಾರವಾಡದಲ್ಲಿ‌ ನಮ್ಮ ಚಿತ್ರದ ಮೊದಲ ಪ್ರದರ್ಶನ(ಪ್ರೀಮಿಯರ್ ಶೋ) ಆಯೋಜಿಸಿದ್ದೇವೆ‌. ಪ್ರೇಕ್ಷಕರೆ ನಮ್ಮ ಚಿತ್ರದ ಸೆಲೆಬ್ರಿಟಿ.‌ ಅವರು ನೋಡಿ ನಮ್ಮ ಚಿತ್ರ ಚೆನ್ನಾಗಿದೆ ಎಂದು ಇನ್ನೊಬ್ಬರಿಗೆ ಹೇಳಿದಾಗ ಖಂಡಿತವಾಗಿ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ನಟ ಕಿಚ್ಚ ಸುದೀಪ್ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ‌‌. ಅವರಿಗೆ ನಮ್ಮ ತಂಡದಿಂದ ಧನ್ಯವಾದ. ಜುಲೈ 11 ರಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು.

 

 

ಇದು ನಮ್ಮ ಡಿ.ಕ್ರಿಯೇಷನ್ಸ್ ನಿರ್ಮಾಣದ ಐದನೇ ಚಿತ್ರ. ಮಂಸೋರೆ ಅವರೊಂದಿಗೆ ಮೂರನೇ ಚಿತ್ರ. ಈ ಚಿತ್ರ ಖಂಡಿತವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಇಷ್ಟವಾದ ಪ್ರೇಕ್ಷಕರು ಇನ್ನೊಬ್ಬರಿಗೂ‌ ಇದು ಒಂದೊಳ್ಳೆ ಚಿತ್ರ. ನೀವು ನೋಡಿ ಎಂದು ಹೇಳುತ್ತಾರೆ ಎಂಬ ಭರವಸೆ ಇದೆ ಎಂದು ನಿರ್ಮಾಪಕ ಆರ್ ದೇವರಾಜ್ ತಿಳಿಸಿದ್ದಾರೆ.

 

 

ನಮ್ಮ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಪ್ರಿಯವಾಗಲಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಆಗಮಿಸಿ ನಮ್ಮ ಚಿತ್ರವನ್ನು ವೀಕ್ಷಿಸಬೇಕೆಂದು ನಾಯಕ ವಿಜಯ್ ಕೃಷ್ಣ ಹಾಗೂ ನಾಯಕಿ ಪ್ರಿಯಾಂಕ ಕುಮಾರ್ ವಿನಂತಿ ಮಾಡಿದ್ದಾರೆ‌.

 

 

 

ಟ್ರಾವೆಲಿಂಗ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮಂಸೋರೆ ಕಥೆ ಬರೆದಿದ್ದಾರೆ. ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಗೌಸ್ ಪೀರ್, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ರಚಿಸಿದ್ದಾರೆ. ಟಿ ಪಿ ಕೈಲಾಸಂ ಅವರ ಖ್ಯಾತ ಕೋಳಿಕೆ ರಂಗ ಹಾಡನ್ನು ಹೊಸ ಮಾದರಿಯಲ್ಲಿ ಸಂಯೋಜನೆ ಮಾಡಿ ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನ ಹಾಗೂ ಸರವಣ ಕುಮಾರ್ ಅವರ ಕಲಾ ನಿರ್ದೇಶನವಿರುವ “ದೂರ ತೀರ ಯಾನ”ಕ್ಕೆ ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ, ಗೋವಾ ಮುಂತಾದ ಕಡೆ 40 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

Spread the love
Click to comment

Copyright © 2019 PopcornKannada.com