Cinema News

ಗದರ್ -2 ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್..ಬಾಲಿವುಡ್ ಗೆ ಕಾಲಿಟ್ಟ ವೀರಸಿಂಹ ರೆಡ್ಡಿ ನಿರ್ದೇಶಕ ಗೋಪಿಚಂದ್ ಮಲಿನೇನಿ..

Published

on

ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಸನ್ನಿ ಡಿಯೋಲ್ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಕೈ ಜೋಡಿಸಿದ್ದಾರೆ. ಈ ಇಬ್ಬರ ಹೊಸ ಸಿನಿಮಾಗೆ #SDGM ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ.

ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಹಾಗೂ ವೈ ರವಿ ಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಗೋಪಿಚಂದ್ ಬಾಲಿವುಡ್ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಡುತ್ತಿದ್ದಾರೆ.

ಕ್ರ್ಯಾಕ್ ಮತ್ತು ವೀರ ಸಿಂಹ ರೆಡ್ಡಿ ಸತತ ಎರಡು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು #SDGM ಚಿತ್ರದ ಮೂಲಕ ಆಕ್ಷನ್ ಎಂಟರ್‌ಟೈನರ್ ಕಥೆ ಹೇಳಲಿದ್ದಾರೆ. ಗೋಪಿಚಂದ್ ಹೇಳಿದ ಕಥೆಗೆ ಸನ್ನಿ ಡಿಯೋಲ್ ಕೂಡ ಥ್ರಿಲ್ ಆಗಿದ್ದಾರೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಮೂಡಿ ಬರಲಿದ್ದು, ಇದೇ ತಿಂಗಳ 22ರಿಂದ ಚಿತ್ರೀಕರಣ ಶುರುವಾಗಲಿದೆ.

ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ, ತಮನ್ ಎಸ್ ಸಂಗೀತ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.

Spread the love

Copyright © 2019 PopcornKannada.com