Cinema News

ಸುಂದರ್ ರಾಜ್ ಅವರ 250ನೇ ಸಿನಿಮಾ ‘ಚಾರ್ಜ್ ಶೀಟ್’; ಟೀಸರ್‌ಗೆ ಚಾಲನೆ

Published

on

ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್ ಅವರ 250ನೇ ಸಿನಿಮಾ ‘ಚಾರ್ಜ್ ಶೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಅವರು ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ಧ್ರುವ ಸರ್ಜಾ, ಸಿನಿಮಾದ ಹಾಡು ಹಾಗೂ ಸುಂದರ್ ರಾಜ್ ಅವರ ಅಭಿನಯವನ್ನು ಮೆಚ್ಚಿಕೊಂಡರು. ಪ್ರತಿಭೆ ಮತ್ತು ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ ಎಂದ ಅವರು, ‘ಚಾರ್ಜ್ ಶೀಟ್’ ಸಿನಿಮಾವನ್ನು ಕುಟುಂಬದೊಂದಿಗೆ ವೀಕ್ಷಿಸುವುದಾಗಿ ಹೇಳಿದರು.

 

 

 

 

 

ನಟ ಸುಂದರ್ ರಾಜ್ ಮಾತನಾಡಿ, ಸಿನಿಮಾ ತಮ್ಮ ಪಾಲಿಗೆ ಒಂದು ಕನಸು ಎಂದು ಹೇಳಿದರು. ರಂಗಭೂಮಿಯಿಂದ ಚಿತ್ರರಂಗದವರೆಗೆ ಬಂದ ತಮ್ಮ ಪಯಣವನ್ನು ನೆನಪಿಸಿಕೊಂಡ ಅವರು, ‘ಚಾರ್ಜ್ ಶೀಟ್’ ಕಥೆ ತಮ್ಮನ್ನು ರೋಮಾಂಚನಗೊಳಿಸಿತು ಎಂದರು. ದೇಶಕ್ಕೆ ಸೈನಿಕ, ರಾಜ್ಯಕ್ಕೆ ಪೊಲೀಸ್ ರಕ್ಷಣೆ ನೀಡುವ ಪರಿಕಲ್ಪನೆಯೊಂದಿಗೆ ಮೂಡಿಬಂದಿರುವ ಈ ಸಿನಿಮಾ ಜೆಪಿ ನಗರದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿದೆ ಎಂದು ತಿಳಿಸಿದರು.

 

 

 

 

 

ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರವನ್ನು ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ಮತ್ತು ಲಕ್ಷ್ಮಣ್ ನಿರ್ಮಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಮೂಲ ಕಥೆಯನ್ನು ಆಧರಿಸಿರುವ ಸಿನಿಮಾಗೆ ‘U/A’ ಪ್ರಮಾಣಪತ್ರ ದೊರೆತಿದೆ. ಚಿತ್ರದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಸತ್ಯಶ್ರೀ, ಅಮರ್, ರೂಪೇಶ್ ಸೇರಿದಂತೆ ಹಲವರು ನಟಿಸಿದ್ದು, ಸಮೀರ್ ಕುಲಕರ್ಣಿ ಸಂಗೀತ ಹಾಗೂ ಪ್ರಮೋದ್ ಭಾರತೀಯ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ

Spread the love

Copyright © 2019 PopcornKannada.com