Box Office

ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ

Published

on

ಸುಮಲತಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಮತ್ತು ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಎರಡು ಚಿತ್ರಗಳು ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚಿವೆ.

 

ಲೋಕಸಭೆ ಚುನಾವಣೆ ಫಲಿತಾಂಶ ಬಂದ ಮರುದಿನವೇ ಸುಮಲತಾ ಅಂಬರೀಶ್ ಅಭಿನಯದ ‘ಡಾಟರ್ ಆಫ್ ಪಾರ್ವತಮ್ಮ’ ತೆರೆ ಕಂಡಿತ್ತು. ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಚಿತ್ರ ಮೊದಲ ವಾರದಲ್ಲೇ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಿಂದ ಹೊರಬಿದ್ದಿದೆ.

 

ಚಿತ್ರ ವಿಮರ್ಶಕರಿಂದ ಸಿನಿಮಾ ಪರ್ವಾಗಿಲ್ಲ ,ನೋಡಬಹುದು ಎಂದು ಹೇಳಿದರೂ ಚಿತ್ರರಸಿಕರು ಚಿತ್ರವನ್ನು ತಿರಸ್ಕರಿಸಿದ್ದಾರೆ.

 

 

 

ಅತ್ತ ಅಮ್ಮನ ಸಿನಿಮಾ ಬಿಡುಗಡೆಯಾದ ನಂತರ ವಾರದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಚಿತ್ರ ತೆರೆಕಂಡಿತ್ತು. ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಗಶೇಖರ್ ನಿರ್ದೇಶನದ ಈ ಚಿತ್ರ ತೆರೆಕಂಡಿತ್ತು.

 

 

ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದೆ. ಸಿನಿಮಾದ ಮೇಕಿಂಗ್ ಅದ್ದೂರಿತನದಿಂದ ಕೂಡಿದ್ದರೂ ಚಿತ್ರಕತೆ ಮಂದಗತಿಯಲ್ಲಿ ಇತ್ತು.
ಇನ್ನು ಅಭಿಷೇಕ್ ಅಂಬರೀಶ್ ಅವರ ನಟನೆ ಕೂಡ ಸುಧಾರಣೆ ಕಾಣಬೇಕು ಎಂದು ವಿಮರ್ಶಕರು ಬರೆದುಕೊಂಡಿದ್ದರು.

ಮಂಡ್ಯದಲ್ಲಿ ಗೆಲುವಿನ ರುಚಿ ಕಂಡಿದ್ದ ಅಮ್ಮ ಸುಮಲತಾ ಮತ್ತು ಮಗ ಅಭಿಷೇಕ್ ಸ್ಯಾಂಡಲ್ ವುಡ್ ನಲ್ಲಿ ಸೋಲಿನ ಕಹಿ ಕಂಡಿದ್ದಾರೆ.

Spread the love
Click to comment

Copyright © 2019 PopcornKannada.com