Cinema News

ಉತ್ತಮಬೆಲೆಗೆ ಶುಗರ್‌ಲೆಸ್ ಹಿಂದಿ ರೀಮೇಕ್ ರೈಟ್ಸ್

Published

on

ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಶುಗರ್‌ ಲೆಸ್ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ನ್ನು ಹೆಸರಾಂತ ಸಂಸ್ಥೆಯೊಂದು ಖರೀದಿಸಿದೆ.
ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್ (ಲಂಡನ್ ಹಾಗೂ ಮುಂಬೈ)ನ ಶಿವ ಆರ್ಯನ್ ಅವರು ಶುಗರ್ಲೆಸ್ ವಿತ್ರದ ಕಂಟೆಂಟ್ ನಿರೂಪಣೆಯನ್ನು ಇಷ್ಟ ಪಟ್ಟು ಉತ್ತಮ ಬೆಲೆಗೆ ಖರೀದಿಸಿದ್ದಾರೆ. ಶಿವ ಆರ್ಯನ್ ಕೂಡ ಒಬ್ಬ ಪ್ರತಿಭಾವಂತ ಕಲಾವಿದ, ನಿರ್ಮಾಪಕ ಹಾಗೂ ಉದ್ಯಮಿಯಾಗಿದ್ದು ಶುಗರ್ ಲೆಸ್ ಸಿನಿಮಾದ ಮೇಕಿಂಗ್ ಅವರಿಗೆ ಇಷ್ಟವಾಗಿದೆ. ಬರುವ ಜುಲೈ ತಿಂಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

 

 

 

 

 

ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ
ಜೊತೆಗೆ ನಿರ್ಮಾಣವನ್ನೂ ಸಹ ಶಶಿಧರ್ ಕೆ.ಎಂ. ಅವರೇ ಮಾಡಿದ್ದು, ಅವರ ಜೊತೆ
ಸಹಾಯಕ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ
ಕೃಷ್ಣೇಗೌಡ ಸಾತ್ ನೀಡಿದ್ದಾರೆ. ಅಲ್ಲದೆ ಈ ಚಿತ್ರದ ಕಾರ್ಯಕಾರಿ
ನಿರ್ಮಾಪಕರಾಗಿ ರಘು ಸಿಂಗಂ ಹಾಗೂ ದಿವ್ಯ ಶಶಿಧರ್ ಕಾರ್ಯನಿರ್ವಹಿಸಿದ್ದಾರೆ. ದಿಶಾ ಎಂಟರ್‌ಟೈನ್‌ಮೆಂಟ್ ಹಾಗೂ ಜಾಜಿ
ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಶುಗರ್‌ಲೆಸ್
ಚಿತ್ರದ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್
ಸೀಳಿನ್ ಕೆಲಸ ಮಾಡಿದ್ದು, ಡಾ|| ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ,
ಗುರು ಕಶ್ಯಪ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ
ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್,
ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ. ಈ ಚಿತ್ರಕ್ಕೆ
ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ
ನಡೆಸಲಾಗಿದೆ. ಸಕ್ಕರೆ ಖಾಯಿಲೆ ಹಿನನೆಲೆಯಲ್ಲಿ ನಡೆಯುವ ತುಂಬಾ ಹ್ಯೂಮರಸ್ ಆದ ನಿರೂಪಣೆ ಇರುವಂಥ ಚಿತ್ರ ಇದಾಗಿದ್ದು, ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿರುತ್ತದೆ.
ನಾನು ಸ್ಕಿಪ್ಟ್ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಡಿದ್ದೆನೋ, ಅದೇ ರೀತಿಯಲ್ಲಿ ನಾಯಕನಟ ಪೃಥ್ವಿ ಅಂಬರ್ ನಟಿಸಿದ್ದಾರೆ ಎಂದು ಶಶಿಧರ ಹೇಳಿದ್ದಾರೆ.

Spread the love
Click to comment

Copyright © 2019 PopcornKannada.com