Cinema News

ಸೋನು ಕಕ್ಕರ್ ಕಂಠಸಿರಿಯಲ್ಲಿ “ಫುಲ್ ಮೀಲ್ಸ್” ಹಾಡು .

Published

on

ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ ಸಿನೆಮಾದ ಒಂದು ಹಾಡನ್ನು ಬಾಲಿವುಡ್ ಗಾಯಕಿ ‘ಸೋನು ಕಕ್ಕರ್’ ಹಾಡಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಜೋಗಿ ಸಿನೆಮಾದ ‘ಬಿಲ್ ಲ್ಯಾಡೆನ್ನು ನಮ್ ಮಾವ’ ರಂಗ ಎಸ್ ಎಸ್ ಎಲ್ ಸಿ ಯ ‘ಊರ ಕಣ್ಣು’ ಮಿಲನ ಚಿತ್ರದ ‘ಕದ್ದು ಕದ್ದು ನೋಡೊ ಕಳ್ಳ’ ಇನ್ನೂ ಅನೇಕ ಸೂಪರ್ ಹಿಟ್ ಗೀತೆಗೆಳನ್ನು ಹಾಡಿದ್ದ ಸೋನು ಕ್ಕಕ್ಕರ್ ಬಹಳ ಸಮಯದ ನಂತರ ಮತ್ತೊಮ್ಮೆ ಕನ್ನಡದ ಗೀತೆಯನ್ನು ಹಾಡಿದ್ದಾರೆ. ಗುರು ಕಿರಣ್ ರಾಗ ಸಂಯೋಜನೆ ಮತ್ತು ಕವಿ ರಾಜ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಗೀತೆ ಕೇಳುಗರನ್ನು ತನ್ನತ್ತ ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಸಿನೆಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು. 2025 ರ ಆರಂಭದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ.

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. . ಲಿಖಿತ್ ಶೆಟ್ಟಿಗೆ ನಾಯಕಿಯರಾಗಿ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದು, ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನೆಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Spread the love
Click to comment

Copyright © 2019 PopcornKannada.com