Cinema News

ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಯ್ತು ಸೋನಮ್ ಹಂಚಿಕೊಂಡು ಪೋಟೋ

Published

on

ತುಂಬು ಗರ್ಭಿಯಾಗಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಇದೀಗ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ನಿತ್ಯ ಒಂದಲ್ಲ ಒಂದು ರೀತಿ ತಮ್ಮ ಬೇಬಿ ಬಂಪ್ ತೋರಿಸುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸಹೋದರಿ ರಿಯಾ ಕಪೂರ್ನೊಂದಿಗೆ ಲಂಡನ್ನಲ್ಲಿದ್ದು, ಅಲ್ಲಿನ ಫೋಟೋವೊಂದು ರಿಯಾ ಶೇರ್ ಮಾಡಿದ್ದು, ಇದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಲಂಡನ್ನ ರೆಸ್ಟೋರೆಂಟ್ನ ಹೊರಗೆ ತೆಗೆದ ಈ ಫೋಟೋದಲ್ಲಿ ಸೋನಮ್ ಬೇಬಿ ಬಂಪ್ ತೋರಿಸಿದ್ದು ಟ್ರೋಲಿಗರು ಟ್ರೋಲ್ ಮಾಡಿದ್ದಾರೆ. ಸೋನಂ ಸಹೋದರಿ ರಿಯಾ ಸೋಷಿಯಲ್ ಮೀಡಿಯಾದಲ್ಲಿ ಸೋನಂ ಮತ್ತು ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋನಮ್ ಯಾಕೆ ಯಾವಗಲೂ ಬೇಬಿ ಬಂಪ್ ತೋರಿಸುತ್ತಾರೆ ಎಂದು ಸಾಕಷ್ಟು ಮಂದಿ ಕಿಡಿಕಾರಿದ್ದಾರೆ.
ಫೋಟೋದಲ್ಲಿ ಸೋನಮ್ ಬ್ರಾಲೆಟ್ ಮತ್ತು ಕೋಟ್ನೊಂದಿಗೆ ಮ್ಯಾಚಿಂಗ್ ಕಲರ್ ಪ್ಯಾಂಟ್ ಧರಿಸಿದ್ದಾರೆ. ಕಣ್ಣುಗಳಿಗೆ ಕಪ್ಪು ಕನ್ನಡಕ ಧರಿಸಿ ನಾಲಿಗೆಯನ್ನು ಹೊರ ಹಾಕಿ ಫೋಸ್ ನೀಡಿದ್ದಾರೆ.

Spread the love

Copyright © 2019 PopcornKannada.com