Cinema News
ಮೆಚ್ಚುಗೆ ಪಡೆಯುತ್ತಿರುವ “ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡು
“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲೀರಿಕಲ್ ವೀಡಿಯೊ ತೆರೆ ಕಂಡು ಲಕ್ಷಾಂತರ ಪ್ರೇಕ್ಷಕರುಗಳ ಮನ ಗೆದ್ದಿದೆ, ಅಭಿಲಾಷ್ ಗುಪ್ತರವರ ಸಂಗೀತ ನಿರ್ದೇಶನದಲ್ಲಿ, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿಯವರ ದ್ವನಿಯಲ್ಲಿ “ಸಿಂಪಲ್ ಸಲುಗೆ” ಹಾಡು ಸೊಗಾಸಾಗಿ ಮೂಡಿ ಬಂದಿದ್ದು. “ಹೀಗೊಂದು ದಿನ” ಚಿತ್ರವನ್ನು ನಿರ್ದೇಶಿಸಿದ ವಿಕ್ರಮ್ ಯೋಗಾನಂದ ಅವರು ಈಗ ಮತ್ತೊಂದು ಬಾರಿ “ಕುಷ್ಕ” ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳಿದ್ದಾರೆ.
ಲಕ್ಷ್ಮಿ ಬಾರಮ್ಮ ದಾರಾವಾಹಿಯ ಚಂದನ್ ಗೌಡ ಮತ್ತು ಕೆಮಿಸ್ಟ್ರಿ ಕರಿಯಪ್ಪ ಚಿತ್ರದಲ್ಲಿ ನಟಿಸಿದ ಸಂಜನಾ ಆನಂದ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಮಧ್ಯೆ ಒಂದು “ಸಿಂಪಲ್ ಸಲುಗೆ” ಮೂಡಿದಾಗ ಬರುವಂತ ಡೂಯಟ್ ಹಾಡು ಇದಾಗಿದ್ದು. ಹೀಗೊಂದು ದಿನ ಚಿತ್ರಕ್ಕೆ ಸಂಗೀತ ನೀಡಿ ಹೊಸ ಶೈಲಿಯಲ್ಲಿ ಹಾಡುಗಳನ್ನು ಕೊಟ್ಟಿದ್ದ ಅಭಿಲಾಷ್ ಗುಪ್ತ ಹಾಗೂ ಅದೇ ಚಿತ್ರಕ್ಕೆ ಎಲ್ಲ ಹಾಡುಗಳನ್ನು ಬರೆದಿದ್ದ ರಾಮಕೃಷ್ಣ ರಾಣಗಟ್ಟಿ ಇವರಿಬ್ಬರ ಕಾಂಬಿನೆಷನ್ ಅಲ್ಲಿ ಮೂಡಿ ಬಂದ “ಸಿಂಪಲ್ ಸಲುಗೆ” ಹಾಡು ಕೇಳುಗರ ಮನದಲ್ಲಿ ಜಾಗ ಮಾಡಿಕೊಳ್ಳುತ್ತಿದೆ.
ನಿರ್ದೇಶಕರಾದ ಗುರು ಪ್ರಸಾದ್, ಶೋಬರಾಜ್, ಹಾಗೂ ಕೈಲಾಶ್ ಪಾಲ್ ಅವರು ಮುಖ್ಯ ಪಾತ್ರಗಳಲ್ಲಿ “ಕುಷ್ಕ” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು “ಕುಷ್ಕ” ಚಿತ್ರದ ನಿರ್ದೇಶಕರಾದ ವಿಕ್ರಮ್ ಯೋಗಾನಂದ ಅವರು ಹೇಳಿದ್ದಾರೆ.