Cinema News

ವೈರಲ್ ಆಯ್ತು ಶ್ರೀನಿಧಿ ಶೆಟ್ಟಿ ಅಂಕಪಟ್ಟಿ, ಮೆಚ್ಚುಗೆ ಸೂಚಿಸಿದ ಕನ್ನಡಿಗರು

Published

on

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ತೆಲುಗು ಹಾಗೂ ತಮಿಳು ಸಿನಿಮಾರಂಗದಲ್ಲೂ ತಮ್ಮ ಚಾಪೂ ಮೂಡಿಸುತ್ತಿದ್ದಾರೆ. ಈ ಮಧ್ಯೆ ಶ್ರೀನಿಧಿ ಶೆಟ್ಟಿಯ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಶ್ರೀನಿಧಿ ಶೆಟ್ಟಿಯ ಅಂಕಪಟ್ಟಿ ನೋಡಿ ಕನ್ನಡಿಗರು ಶಹಭಾಷ್ ಅಂತಿದ್ದಾರೆ. ಮೂಲತಃ ಕನ್ನಡದ ಹುಡುಗಿಯಾಗಿರುವ ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಘಳಿಸಿದ್ದಾರೆ. ಕನ್ನಡ ವಿಭಾಗದಲ್ಲಿ 125 ಅಂಕಕ್ಕೆ 121 ಅಂಕ ಪಡೆದುಕೊಂಡಿದ್ದು ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಕೆಜಿಎಫ್ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿ ವಿಕ್ರಂ ನಟನೆಯ ಕೋಬ್ರಾ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಶ್ರೀನಿಧಿ ಮತ್ತಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಅಂತಿದ್ದಾರೆ ಅಭಿಮಾನಿಗಳು.

 

 

 

Spread the love
Click to comment

Copyright © 2019 PopcornKannada.com