Cinema News
ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾದ ಕನ್ನಡತಿ ಶ್ರದ್ಧಾ!
ಜೆರ್ಸಿ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ ಶ್ರದ್ಧಾ ಶ್ರೀನಾಥ್ ಈಗ ಮೇಗಾ ಸ್ಟಾರ್‌ಗೆ ಜೋಡಿಯಾಗಲಿದ್ದಾರೆ.
ಸದ್ಯ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಇರುವ ಚಿರಂಜೀವಿ ಈಗಾಗಲೇ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ಭರತ್ ಅನೇ ನೇನು ಖ್ಯಾತಿಯ ಕೋರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ.
ಈಗಾಗಲೇ ಕೊರಟಾಲ ಶ್ರದ್ಧಾರನ್ನು ಸಂಪರ್ಕಿಸಿದ್ದು, ಶ್ರದ್ಧಾ ಅದರ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲವಂತೆ. ಜತೆಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ, ಮೊದಲ ನಾಯಕಿ ನಯನ ತಾರ ಅವರ ಪಾಲಾಗಿದ್ದು, ಎರಡನೇ ನಾಯಕಿಯಾಗಿ ಶ್ರದ್ಧಾಗೆ ಆಫರ್ ಮಾಡಿದ್ದಾರೆ ಶಿವ ಆ್ಯಂಡ್ ಟೀಮ್.
ಒಟ್ಟಿನಲ್ಲಿ ಶ್ರದ್ಧಾ ಶ್ರೀನಾಥ್ ದಿನೇ ದಿನೇ ದಕ್ಷಿಣ ಭಾರತದಲ್ಲಿ ಖ್ಯಾತಿಯ ಉತ್ತುಂಗಕ್ಕೆ ಏರುತ್ತಿದ್ದಾರೆ.