Cinema News

ಅಲ್ಲು ಅರ್ಜುನ್ ನೋಡಿ ಶಾಕ್ ಆದ ಅಭಿಮಾನಿಗಳು: ವಡಾ ಪಾವ್ ಎಂದ ನೆಟ್ಟಿಗರು

Published

on

ಸಿನಿಮಾ ರಂಗ ಅಂದರೆ ಅಲ್ಲಿ ಥಳುಕು ಬಳುಕು ಇರ್ಲೇ ಬೇಕು. ತಮ್ಮ ಬಾಡಿಯನ್ನ ಫಿಟ್ ಆಗಿ ಇಟ್ಟುಕೊಳ್ಳಲು ನಟ, ನಟಿಯರು ಇನ್ನಿಲ್ಲದ ಸರ್ಕಸ್ ಮಾಡ್ತಾರೆ. ಹಗಲು ರಾತ್ರಿ ಜಿಮ್ ನಲ್ಲಿ ಮೈ ಬೆವರಿಳಿಸಿ ಸಖತ್ ಫಿಟ್ ಆಗಿರ್ತಾರೆ. ಅದ್ರಲ್ಲೂ ನಟ ಅಲ್ಲು ಅರ್ಜುನ್ ಯಾವಾಗಲು ಸಖತ್ ಸ್ಟೈಲಿಶ್ ಹಾಗೂ ಫಿಟ್ ಆಗಿ ಇರ್ತಾರೆ. ಆದ್ರೆ ಈಗ ಅಲ್ಲು ಅರ್ಜುನ್ ಬಾಡಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಸಿನಿಮಾದ ಬಳಿಕ ಪುಷ್ಪ ಪಾರ್ಟ್ 2 ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಈ ಮಧ್ಯೆ ಅಲ್ಲು ಅರ್ಜುನ್ ದೇಹ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
ಅಲ್ಲು ಅರ್ಜುನ್ ಹಲವು ದಿನಗಳ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಅಲ್ಲು ಅರ್ಜುನ್ ಲುಕ್ ಬಗ್ಗೆ ಚರ್ಚೆ ಆಗುವ ಬದಲು, ಅಲ್ಲು ಲುಕ್ ಟ್ರೋಲ್ ಆಗುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿರುವುದು.
ನಟ ಅಲ್ಲು ಅರ್ಜುನ್ ನೀಲಿ ಬಣ್ಣದ ಟೀ ಶರ್ಟ್ ತೊಟ್ಟು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಸ್ಟೈಲಿಶ್ ಸ್ಟಾರ್ ಎಂದು ಕರೆಸಿಕೊಳ್ಳುವ ಅಲ್ಲು ಅರ್ಜುನ್ ಸದ್ಯ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ದಪ್ಪಾ ಆಗುವುದರ ಜೊತೆಗೆ ಗಡ್ಡ ಹಾಗೂ ಉದ್ದ ಕೂಡ ಬಿಟ್ಟಿರುವುದರಿಂದ ಅಲ್ಲು ಅರ್ಜುನ್ ಟ್ರೋಲ್ ಆಗ್ತಿದ್ದಾರೆ.
ಅಲ್ಲು ಅರ್ಜುನ್ ಲುಕ್ಗೆ ನಾನಾ ಬಗೆಯ ಕಮೆಂಟ್ಗಳು ಬರ್ತಿವೆ. ಹಾಗಾಗಿ ಅಲ್ಲು ಅರ್ಜುನ್ ಈ ಲುಕ್ ಕಂಡವರು ಅವರನ್ನು ವಡಾ-ಪಾವ್ ಎನ್ನುತ್ತಿದ್ದಾರೆ. ಈ ಹಿಂದೆ ನಟ ಪ್ರಭಾಸ್ ದಪ್ಪಗಾಗಿದ್ದು ನೋಡಿ ನೆಟ್ಟಿಗರು ಇದೇ ರೀತಿ ಟ್ರೋಲ್ ಮಾಡಿದ್ದರು.
ಇನ್ನೂ ಕೆಲವರು ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಪಾರ್ಟ್ 2ಗಾಗಿ ಈ ರೀತಿ ದಪ್ಪಗಾಗಿದ್ದು ಉದ್ದ ಕೂದಲು ಹಾಗೂ ಗಡ್ಡ ಬಿಟ್ಟಿರಬಹುದು ಎನ್ನುತ್ತಿದ್ದಾರೆ. ಸದ್ಯ ಚಿತ್ರತಂಡ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ತುಂಬಾನೆ ಬ್ಯುಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ‘ಪುಷ್ಪ 2’ ಸಿನಿಮಾ ಇದೇ ವರ್ಷ ಡಿಸೆಂಬರ್ನಲ್ಲಿ ತೆರೆಕಾಣಲಿದೆ.

Spread the love
Click to comment

Copyright © 2019 PopcornKannada.com