Cinema News

‘ಭರಾಟೆ’ಗೆ ಶಿವಣ್ಣ ಸಾಥ್

Published

on

ಶ್ರೀಮುರುಳಿ ನಟನೆಯ ಭರಾಟೆ ಸಿನಿಮಾಗೆ ಶಿವರಾಜ್‌ಕುಮಾರ್‌ ಅವರ ಸಾಥ್‌ ಸಿಕ್ಕಿದೆ. ಅಂದರೆ ಈ ಸಿನಿಮಾದ ಕಥೆಯನ್ನು ಶಿವರಾಜ್‌ಕುಮಾರ್‌ ನೇರೆಟ್‌ ಮಾಡಲಿದ್ದಾರೆ.

ಹೌದು, ಭರ್ಜರಿ ಚೇತನ್‌ಕುಮಾರ್‌ ನಿರ್ದೇಶನ ಮಾಡಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದ್ದು, ಆ ಸಿನಿಮಾಗಾಗಿ ಶಿವರಾಜ್‌ಕುಮಾರ್‌ ಧ್ವನಿ ನೀಡಿದ್ದಾರೆ. ಶಿವರಾಜ್‌ಕುಮಾರ್‌ ಅವರ ಧ್ವನಿಯನ್ನುಶನಿವಾರ ರೆಕಾರ್ಡ್‌ ಮಾಡಲಾಗಿದೆ.

 

 

ಶ್ರೀಮುರುಳಿಗೆ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಾಯಿಕುಮಾರ್‌, ತಾರಾ, ಸುಮನ್‌ ಸೇರಿದಂತೆ ಬಹು ತಾರಾಗಣವೇ ಇದೆ. ಇನ್ನು ಈ ಚಿತ್ರದ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಹಿಂದೆ ಚೇತನ್‌ ನಿರ್ದೇಶನದ ಬಹದ್ದೂರ್‌ಗೆ ಪುನೀತ್‌ರಾಜ್‌ಕುಮಾರ್‌ ಧ್ವನಿ ನೀಡಿದ್ದರು. ಭರ್ಜರಿಗೆ ದರ್ಶನ್‌ ವಾಯ್ಸ್‌ ನೀಡಿದ್ದರು. ಈಗ ಶಿವರಾಜ್‌ಕುಮಾರ್‌ ಧ್ವನಿ ನೀಡಿದ್ದಾರೆ.

 

Spread the love
Click to comment

Copyright © 2019 PopcornKannada.com