Cinema News
ಸಲಗಕ್ಕೆ ಸಂಜನಾ ಆನಂದ್ ನಾಯಕಿ
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಟಿಸಿದ್ದ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.
ಈಗಾಗಲೇ ಅಜಯ್‌ರಾವ್ ಜತೆ ಒಂದು ಸಿನಿಮಾ, ಚಿರಂಜೀವಿ ಸರ್ಜಾಗೆ ನಾಯಕಿ, ಖುಷ್ಕ ಎಂಬ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಸಾಲಿಗೆ ಸಲಗ ಕೂಡಾ ಸೇರಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿನ ತಮ್ಮ ಮುಗ್ಧ ನಟನೆಯ ಮೂಲಕ ಸಂಜನಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಅದೇ ಅವರಿಗೆ ಒಂದರ ಹಿಂದೆ ಒಂದರಂತೆ ಸಿನಿಮಾಗಳ ಅವಕಾಶವನ್ನು ನೀಡುತ್ತಿದೆ. ಇದೆಲ್ಲದರ ಜತೆಯಲ್ಲಿ ಹನಿಮೂನ್ ಎಂಬ ವೆಬ್ ಸೀರಿಸ್ನಲ್ಲಿಯೂ ಅವರು ನಟಿಸುತ್ತಿದ್ದಾರೆ.