Movie Reviews

ಸದ್ದು ವಿಚಾರಣೆ ನಡೆಯುತ್ತಿದೆ ಕನ್ನಡ ಚಿತ್ರ ವಿಮರ್ಶೆ

Published

on

ಕನ್ನಡ ಚಿತ್ರ: ಸದ್ದು ವಿಚಾರಣೆ ನಡೆಯುತ್ತಿದೆ
ನಿರ್ದೇಶನ: ಭಾಸ್ಕರ್‌ ನೀನಾಸಂ
ನಿರ್ಮಾಣ: ಸುರಭಿ ಲಕ್ಷ್ಮಣ್‌
ಸಂಗೀತ: ಸಚಿನ್‌ ಬಸ್ರೂರು
ಸಿನಿಮಾಟೋಗ್ರಫಿ: ರಾಜ್‌ಕಾಂತ್‌ ಎಸ್‌ ಕೆ
ಕಲಾವಿದರು: ರಾಕೇಶ್‌ ಮಯ್ಯ, ಪಾವನ, ಮಧುನಂದನ್‌, ರಾಘು ಶಿವಮೊಗ್ಗ, ಜಹಾಂಗೀರ್‌, ಅಚ್ಯುತ್‌ ಕುಮಾರ್‌ ಮತ್ತಿತರರು.
ರೇಟಿಂಗ್‌:***1/2

 

ಹೊಸ ನಿರ್ದೇಶಕರ ಸಿನಿಮಾಗಳು ಇತ್ತೂಚೆ ಹೆಚ್ಚು ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಈಗ ‘ ಸದ್ದು ವಿಚಾರಣೆ’ ನಡೆಯುತ್ತದೆ ಸಹ ಸೇರಿಕೊಂಡಿದೆ.
ಕಾಣೆಯಾದ ಯುವ ಜೋಡಿಗಳನ್ನು ಹುಡುಕುವ ಥ್ರಿಲ್ಲಿಂಗ್ ಪ್ರಕ್ರಿಯೆಯೇ ಈ ಸಿನಿಮಾದ ಕಥೆ. ಆ ಯುವ ಜೋಡಿ ಯಾಕೆ ಕಳೆದು ಹೋಗಿರುತ್ತಾರೆ. ಅದರ ಹಿಂದೆ ಯಾರಿದ್ದಾರೆ ಎಂಬೆಲ್ಲವೂ ಚಿತ್ರಕಥೆಯಲ್ಲಿದೆ. ಇದು ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿದೆ. 

ನಿರ್ದೇಶಕರು ಇಲ್ಲಿ ತನಿಖೆಯ ಕಥೆಯ ಜತೆಗೆ ಜಾತಿ ಜಗಳ, ಗಂಡ ಹೆಂಡತಿ ಜಗಳ, ಹೀಗೆ ಹಲವು ವಿಷಯಗಳನ್ನು ತೋರಿಸಿದ್ದಾರೆ. ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪ್ರೇಕ್ಷಕನಿಗೆ ಎಲ್ಲಿಯೂ ಗೊಂದಲ ಮೂಡಿಸುವುದಿಲ್ಲ. ಥ್ರಿಲ್ಲರ್ ಜಾನರ್ ನಲ್ಲಿ ಯಾವಾಗ್ಲೂ ಚಿತ್ರಕಥೆ ಬಹಳ ಮುಖ್ಯವಾಗುತ್ತದೆ. ಅದು ಇಲ್ಲಿ ಬಹಳ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ.

ಇಬ್ಬರು ಕಳೆದು ಹೋಗಿರುವವರ ಹುಡುಕಾಟವೇ ಸಿನಿಮಾದ ಜೀವಾಳ, ಹುಡುಕಾಟದ ಪ್ರತಿ ದೃಶ್ಯವೂ ಕುತೂಹಲ ಕಾರಿಯಾಗಿ ಮೂಡಿ ಬಂದಿದೆ.ಇದೆಲ್ಲವೂ ಸೇರಿ ಸಿನಿಮಾ ಸದ್ದು ಒಂದು ಹೊಸ ರೀತಿಯ ನಿರೂಪಣೆ ಇರುವ ಸಿನಿಮಾ ಎನಿಸಿಕೊಳ್ಳುತ್ತದೆ.

ತನಿಖಾಧಿಕಾರಿಯ ಪಾತ್ರಧಾರಿ ಮಧುನಂದನ್‌ ಮತ್ತು ಖಳ ನಟ ರಾಘು ಶಿವಮೊಗ್ಗ ಇಡೀ ಸಿನಿಮಾಗೆ ಬೇರೆಯದ್ದೆ ಕಳೆ ಕೊಟ್ಟಿದ್ದಾರೆ. ಇಬ್ಬರೂ ಇರುವ ಪ್ರತಿ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಮಧುನಂದನ್ ಮೊದಲ ಬಾರಿಗೆ ನಟಿಸಿದ್ದರೂ, ಹಾಗೆ ಅನ್ನಿಸುವುದಿಲ್ಲ. ರಾಘು ಸಹ ತಮ್ಮ ಪಾತ್ರದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ಸಹ ಉತ್ತಮ‌ವಾಗಿ ನಟಿಸಿದ್ದಾರೆ. ನಟ ಅಚ್ಯುತ್‌ ಕುಮಾರ್‌ . ಜಹಾಂಗೀರ್‌ ಮತ್ತು ಕಾನ್‌ಸ್ಟೇಬಲ್‌ ರಾಮಚಂದ್ರಪ್ಪ ಪಾತ್ರಧಾರಿ ಹೀಗೆ ಎಲ್ಲಾಕಲಾವಿದರು ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಂಗೀತ, ಸಿನಿಮಾಟೋಗ್ರಫಿ ಎಲ್ಲವೂ ಚಿತ್ರದ ಕಥೆಗೆ ಪೂರಕವಾಗಿದೆ. ಸಾಮಾನ್ಯವಾಗಿ ಥ್ರಿಲ್ಲರ್ ಮತ್ತು ಇನ್ವೆಸ್ಟಿಗೇಶನ್ ಥ್ರಿಲ್ಲರ್ ಗಳಲ್ಲಿ ಕೊಂಚ ರಾ ರೀತಿಯ ದೃಶ್ಯಗಳಿರುತ್ತವೆ. ಇಲ್ಲಿ ಅದಾವುದು ಇಲ್ಲ ಮುಜುಗರವಿಲ್ಲದೆ ಕುಟುಂಬ ಸಮೇತ ಕೂತು ಈ ಸಿನಿಮಾವನ್ನು ನೋಡಬಹುದು.

Spread the love
Click to comment

Copyright © 2019 PopcornKannada.com