Cinema News
ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಕಮ್‌ಬ್ಯಾಕ್: ‘ಸರ್ಚ್’ಗೆ ಶ್ರೀನಗರ ಕಿಟ್ಟಿ ಶುಭಹಾರೈಕೆ
ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಇದೀಗ ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ‘ಸರ್ಚ್’ ಎಂಬ ಶೀರ್ಷಿಕೆಯ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಬಾವಿ ಮುದ್ದಿನ ಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದ್ದು, ಈ ಸಂದರ್ಭದಲ್ಲಿ ಚಿತ್ರದ ಕಥೆ ಹಾಗೂ ಪಾತ್ರಗಳ ಬಗ್ಗೆ ಕುತೂಹಲ ಮೂಡಿಸುವ ಮಾಹಿತಿಗಳು ಹೊರಬಂದಿವೆ. ಈ ಹಿಂದೆ ಉಗ್ರಂ ಮುರಳಿ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದು, ಇದೀಗ ಗಣ್ಯರ ಸಮ್ಮುಖದಲ್ಲಿ ಸಿನಿಮಾಕ್ಕೆ ಅಧಿಕೃತ ಚಾಲನೆ ದೊರೆತಿದೆ. ಕಥೆಯೇ ತಾವು ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ ಎಂದು ಪಂಕಜ್ ನಾರಾಯಣ್ ತಿಳಿಸಿದ್ದಾರೆ. ಈ ಹಿಂದೆ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರ ತಮ್ಮ ಪಾಲಿಗೆ ವಿಶೇಷವಾಗಿದೆ ಎಂದಿರುವ ಅವರು, ನಿರ್ದೇಶಕ ವೈ.ಬಿ. ರಮೇಶ್ ಕೋಟೆ ಕಲಾವಿದರಿಂದ ಉತ್ತಮ ಅಭಿನಯ ಹೊರತೆಗೆಯಬಲ್ಲ ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಪ್ರಿಯ ‘ದಿಗ್ಗಜರು’ ಸಿನಿಮಾದ ಕಾಲದಿಂದಲೇ ಚಿತ್ರರಂಗದೊಂದಿಗೆ ಗುರುತಿಸಿಕೊಂಡಿರುವ ವೈ.ಬಿ. ರಮೇಶ್ ಕೋಟೆ, ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದೊಂದಿಗೆ ‘ಸರ್ಚ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆಯಿಡುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಸುಮಾರು 25 ರಾತ್ರಿಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ. ಆರಂಭದಲ್ಲಿ ಹುಬ್ಬಳ್ಳಿ ಭಾಷೆಯಲ್ಲಿ, ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಹಿನ್ನೆಲೆಯಲ್ಲೇ ಕಥೆ ಚಿತ್ರೀಕರಿಸುವ ಉದ್ದೇಶವಿತ್ತು. ಆದರೆ ಸ್ಥಳ ಪರಿಶೀಲನೆ ಬಳಿಕ ಆ ಪ್ರದೇಶ ಸಾಕಷ್ಟು ಬದಲಾಗಿರುವ ಕಾರಣ, ಬೆಂಗಳೂರಿನಲ್ಲೇ ಚೆನ್ನಮ್ಮ ಸರ್ಕಲ್ ಸೆಟ್ ನಿರ್ಮಿಸಿ ಕಥೆಯನ್ನು ಬೆಂಗಳೂರಿನ ಹಿನ್ನೆಲೆಗೆ ಹೊಂದಿಸಲಾಗುತ್ತಿದೆ.
‘ಸರ್ಚ್’ನಲ್ಲಿ ನಾಯಕನ ಕಣ್ಣಮುಂದೆಯೇ ನಾಪತ್ತೆಯಾಗುವ ಯುವತಿಯ ಹುಡುಕಾಟವೇ ಕಥೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಮತ್ತೊಂದೆಡೆ ಸಾಫ್ಟ್ವೇರ್ ಉದ್ಯೋಗಿಯೊಬ್ಬನ ಲಗೇಜ್ ಹಾಗೂ ಲ್ಯಾಪ್ಟಾಪ್ಗಾಗಿ ನಡೆಯುವ ಹುಡುಕಾಟವೂ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಒಂದೇ ರಾತ್ರಿಯಲ್ಲಿ ನಡೆಯುವ ಹಲವು ಹುಡುಕಾಟಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಿವೆ ಎಂದು ನಿರ್ದೇಶಕ ರಮೇಶ್ ಭರವಸೆ ನೀಡಿದ್ದಾರೆ. ಚಿತ್ರದಲ್ಲಿ ಪಂಕಜ್ ನಾರಾಯಣ್ ಅವರಿಗೆ ಧಾಮಿನಿ ನಾಯಕಿಯಾಗಿ ನಟಿಸುತ್ತಿದ್ದು, ಮೂಲತಃ ಕೊಡಗಿನವರಾದ ಅವರು ಸದ್ಯ ಉದಯ ವಾಹಿನಿಯ ‘ಮಾಂಗಲ್ಯ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಟಿ ಕೃತ್ತಿಕಾ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದ ಪ್ರತಿಯೊಂದು ಪಾತ್ರವೂ ತಮ್ಮ ಪಾತ್ರದ ಸುತ್ತ ಸುತ್ತುತ್ತದೆ ಎಂದು ಹೇಳಿದ್ದಾರೆ. ‘ಸರ್ಚ್’ ತಮ್ಮ ಐದನೇ ಸಿನಿಮಾ ಎಂದೂ ಅವರು ತಿಳಿಸಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ಸುಭಾನ್ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಸುಭಾನ್, ‘ಸರ್ಚ್’ ಚಿತ್ರದ ಸಹನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ಜನಪ್ರಿಯ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರೆ, ನಟ ಶ್ರೀನಗರ ಕಿಟ್ಟಿ ಕ್ಯಾಮೆರಾ ಆನ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಎಸ್. ನಾರಾಯಣ್ ತಮ್ಮ ಗುರುಗಳಾಗಿದ್ದು, ಅವರ ಪುತ್ರ ಪಂಕಜ್ ಹಾಗೂ ನಿರ್ದೇಶಕ ರಮೇಶ್ ಅವರಿಗೆ ಶುಭ ಹಾರೈಸಿದ ಕಿಟ್ಟಿ, ಸಿನಿಮಾ ಚೊಕ್ಕವಾಗಿ ಮೂಡಿಬರಲಿ ಎಂದು ಹಾರೈಸಿದರು. ಯುವ ನಿರ್ಮಾಪಕ ಯೋಗೇಶ್ ಎನ್. ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಪತ್ರಕರ್ತ ಸೌರಭ ನಾಗರಾಜ್ ಅವರ ಬೆಂಬಲವೂ ಇದೆ. ಒಳ್ಳೆಯ ಕಥಾವಸ್ತು ಹೊಂದಿರುವ ಸಿನಿಮಾ ಎಂಬ ಕಾರಣಕ್ಕೆ ನಿರ್ಮಾಣಕ್ಕೆ ಮುಂದಾದೆ ಎಂದು ಯೋಗೇಶ್ ತಿಳಿಸಿದ್ದಾರೆ. ಅಶೋಕ್ ಕೆ. ರಾಜ್ ಛಾಯಾಗ್ರಹಣ, ಶ್ರೀ ಅಂಜನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸೆಪ್ಟೆಂಬರ್ 15ರಿಂದ ‘ಸರ್ಚ್’ ಚಿತ್ರದ ಚಿತ್ರೀಕರಣ