Cinema News
ರಂಜಾನ್ ಹಬ್ಬಕ್ಕೆ ‘ರಾಬರ್ಟ್’ ಚಿತ್ರದ 3ನೇ ಥೀಮ್ ಪೋಸ್ಟರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ರಾಬರ್ಟ್’ ಚಿತ್ರತಂಡದಿಂದ ಹೊಸ ಸುದ್ದಿ ಹೊರ ಬಂದಿದೆ.
ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಬಹುಕೋಟಿ ವೆಚ್ಚದಲ್ಲಿ ತಯರಾಗುತ್ತಿರುವ ಈ ಚಿತ್ರದ 3ನೇ ಥೀಮ್ ಪೋಸ್ಟರ್ ಅನ್ನು ಇದೇ ಜೂನ್ 5 ರಂದು ರಂಜಾನ್ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಇದಕ್ಕೂ ಮೊದಲು ಚಿತ್ರತಂಡ ಕ್ರಿಸ್ಮಸ್ ಹಬ್ಬಕ್ಕೆ ಒಂದು ಥೀಮ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಆ ಪೋಸ್ಟರ್ನಲ್ಲಿ ನಾಯಕ ದರ್ಶನ್ ಅವರು ಆಂಜನೇಯ ನ ಅವತಾರದಲ್ಲಿ ಕಾಣಿಸಿಕೊಂಡರೆ, ಅವರ ಹೆಗಲ ಮೇಲೆ ಮಗುವೊಂದು ಶ್ರೀರಾಮನ ಅವತಾರದಲ್ಲಿತ್ತು.
ರಾಬರ್ಟ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಮತ್ತು ತಮಿಳುನಾಡಲ್ಲಿ ಎರಡು ಹಂತದಲ್ಲಿ ನಡೆದಿದೆ.
ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.