Cinema News
ರೀ ರಿಕಾರ್ಡಿಂಗ್ ಮುಗಿಸಿದ ಟಗರು ಪುಟ್ಟಿ ಮಾನ್ವಿತ ನಟನೆಯ “ರಿಲ್ಯಾಕ್ಸ್ ಸತ್ಯ”
ರೆಡ್ ಡ್ರಾಗನ್ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಿಸಿರುವ “ರಿಲ್ಯಾಕ್ಸ್ ಸತ್ಯ” ಚಿತ್ರದ ರೀರಿಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.
ಚಿತ್ರವು ಸೆಪ್ಟೆಂಬರ್ ಅಂತ್ಯದಲ್ಲಿ ತೆರೆಗೆ ಬರಲಿದ್ದು, ಎಲ್ಲಾ ವರ್ಗದ ಜನರನ್ನು ತಲುಪಲಿದೆ ಎಂದು ನಿರ್ಮಾಪಕ, ನಿರ್ದೇಶಕ ನವೀನ್ ರೆಡ್ಡಿ ತಿಳಿಸಿದ್ದಾರೆ.
ಚಿತ್ರಕ್ಕೆ ಶಂಕರ್ ರಾಮನ್ ಸಂಭಾಷಣೆ, ಯೋಗಿ ಛಾಯಾಗ್ರಹಣ, ಆನಂದ್ ರಾಜ, ವಿಕ್ರಂ ಸಂಗೀತ, ಧನಂಜಯ ರಂಜನ್, ಸಾಹಿತ್ಯ ಶ್ರೀಕಾಂತ್‍ಗೌಡ ಸಂಕಲನ, ವಿಕ್ರಂ ಮೋರ್ ಸಾಹಸವಿದ್ದು, ನಿರ್ಮಾಣದ ಜೊತೆಗೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನವೀನ್ ರೆಡ್ಡಿ ಹೊತ್ತಿದ್ದಾರೆ.
ತಾರಾಗಣದಲ್ಲಿ ಪ್ರಭು ಮುಂಡ್ಕುರ್, ಮಾನ್ವೀತಾ, ಹರೀಶ್ ಉಗ್ರಂ ಮಂಜು, ಕಡ್ಡಿ ಪುಡಿ ಚಂದ್ರು ಮುಂತಾದವರಿದ್ದಾರೆ.